ಕಾರವಾರ: ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ಘಟನೆ ಕರಾವಳಿಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ದುರ್ಘಟನೆಯಲ್ಲಿ ಸುಮಾರು ಹತ್ತು ಜನ ಸಾವನ್ನಪ್ಪಿದ್ದು, ಕೆಲವರು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದೀಗ ಸೇನೆ ಕೈಜೋಡಿಸಿದೆ.
ನಾಪತ್ತೆಯಾದವರ ಶೋಧ ಕಾರ್ಯಾಚರಣೆಗೆ ಸಾಥ್ ನೀಡಲು ಬೆಳಗಾವಿಯಿಂದ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನ 44 ಸದಸ್ಯರ ತಂಡ ಆಗಮಿಸಿದೆ. ಕಾಸರಗೋಡು ಮೂಲದ ಟ್ರಕ್ ಚಾಲಕ ಅರ್ಜುನ್ ಸಹಿತ ಅವಶೇಷಗಳ ನಡುವೆ ನಾಪತ್ತೆಯಾದವರಿಗಾಗಿ ಶೋಧ ನಡೆದಿದೆ.



















































