ಬೆಳಗಾವಿ: “ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಯಾಗಿದ್ದರೂ, ‘ಕನ್ನಡ’ ಭಾಷೆಯನ್ನು ಕಡ್ಡಾಯವಾಗಿ ಕಲಿಸಲೇಬೇಕು” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಾಲೆಗಳ ಮಾನ್ಯತೆ ನವೀಕರಣ (Renewal) ಮಾಡುವ ಸಂದರ್ಭದಲ್ಲಿಯೇ, ಕನ್ನಡ ಭಾಷೆಯನ್ನು ಕಲಿಸಲೇಬೇಕು ಎಂದು ನಾವು ಆಡಳಿತ ಮಂಡಳಿಯಿಂದ ಲಿಖಿತ ಮುಚ್ಚಳಿಕೆ (Undertaking) ಬರೆಸಿಕೊಳ್ಳುತ್ತಿದ್ದೇವೆ. ಒಂದು ವೇಳೆ ಮುಚ್ಚಳಿಕೆ ಬರೆದುಕೊಟ್ಟ ನಂತರವೂ ಕನ್ನಡ ಕಲಿಸದೇ ಇರುವುದು ಅಥವಾ ಕನ್ನಡ ಮಾತನಾಡುವ ಮಕ್ಕಳ ಬಗ್ಗೆ ತಾರತಮ್ಯ ಎಸಗುತ್ತಿರುವುದು ನಮ್ಮ ಗಮನಕ್ಕೆ ಬಂದರೆ ಅಂತಹ ಶಾಲೆಗಳ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದವರು ತಿಳಿಸಿದ್ದಾರೆ.
ಶಾಲೆಗಳ ಬಗ್ಗೆ ದೂರುಗಳು ಬಂದಾಗ ತಕ್ಷಣವೇ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಶಾಲಾ ಹಂತದಲ್ಲಿ ಕನ್ನಡ ಭಾಷೆಯನ್ನು ಕಾಪಾಡುವುದು ಮತ್ತು ಬೆಳೆಸುವುದು ನಮ್ಮ ಸರ್ಕಾರದ ಹಾಗೂ ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯ ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದವರು ಹೇಳಿದ್ದಾರೆ.
"ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಯಾಗಿದ್ದರೂ, 'ಕನ್ನಡ' ಭಾಷೆಯನ್ನು ಕಡ್ಡಾಯವಾಗಿ ಕಲಿಸಲೇಬೇಕು".
ಶಾಲೆಗಳ ಮಾನ್ಯತೆ ನವೀಕರಣ (Renewal) ಮಾಡುವ ಸಂದರ್ಭದಲ್ಲಿಯೇ, ಕನ್ನಡ ಭಾಷೆಯನ್ನು ಕಲಿಸಲೇಬೇಕು ಎಂದು ನಾವು ಆಡಳಿತ ಮಂಡಳಿಯಿಂದ ಲಿಖಿತ ಮುಚ್ಚಳಿಕೆ (Undertaking) ಬರೆಸಿಕೊಳ್ಳುತ್ತಿದ್ದೇವೆ. ಒಂದು ವೇಳೆ ಮುಚ್ಚಳಿಕೆ ಬರೆದುಕೊಟ್ಟ ನಂತರವೂ… pic.twitter.com/sF96hLk0ip
— Madhu Bangarappa (@Madhu_Bangarapp) December 17, 2025






















































