ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣಗೊಂಡಿದ್ದು, ಸೋಂಕಿತರ ಸಂಖ್ಯೆ 8,658ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ 437 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದೆ.
ಆರೋಗ್ಯ ಇಲಾಖೆ ಆದೇಶದಂತೆ ಡೆಂಗ್ಯೂ ಡೆಂಗ್ಯೂ ಪರೀಕ್ಷೆಯನ್ನು ಹೆಚ್ಚಿಸಲಾಗಿದ್ದು, ಶುಕ್ರವಾರ 2704 ಶಂಕಿತ ಮಾದರಿ ಪರೀಕ್ಷೆ ನಡೆಸಲಾಗದೆ. ಈ ಪೈಕಿ 437 ಮಂದಿಯಲ್ಲಿ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಈ ಪೈಕಿ ಒಂದು ವರ್ಷದೊಳಗಿನ 7 ಮಕ್ಕಳಲ್ಲಿ ಹಾಗೂ 18 ವರ್ಷದೊಳಗಿನ 154 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. 276 ಮಂದಿ ವಯಸ್ಜರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.



















































