ನವದೆಹಲಿ: ಮೈಸೂರಿನ ಮಾಜಿ ಸಂಸದ ವಿಜಯಶಂಕರ್ ಸೇರಿದಂತೆ ಬಿಜೆಪಿ ನಾಯಕರಿಗೆ ರಾಜ್ಯಪಾಲರ ಹುದ್ದೆ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ.
ಈ ಸಂಬಂಧ ಶನಿವಾರ ಆದೇಶ ಹೊರಡಿಸಲಾಗಿದ್ದು, ಮೈಸೂರು ಕ್ಷೇತ್ರದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರು ಮೇಘಾಲಯ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ರಾಜಸ್ಥಾನ ರಾಜ್ಯಪಾಲರಾಗಿ ಹರಿಭಾವು ಕೃಷ್ಣರಾವ್ ಬಾಗ್ಡೆ, ತೆಲಂಗಾಣ ರಾಜ್ಯಪಾಲರಾಗಿ ಜಿಷ್ಣುದೇವ್ ವರ್ಮಾ, ಸಿಕ್ಕಿಮ್ ಗವರ್ನರ್ ಆಗಿ ಓಂ ಪ್ರಕಾಶ್ ಮಾಥೂರ್, ಜಾರ್ಖಂಡ್ ರಾಜ್ಯಪಾಲರಾಗಿ ಸಂತೋಷ್ ಕುಮಾರ್ ಗಂಗ್ವಾರ್ ನೇಮಕಗೊಂಡಿದ್ದಾರೆ.
ಛತ್ತೀಸ್‌ಗಢ ರಾಜ್ಯದ ಗವರ್ನರ್ ಆಗಿ ರಮೇನ್ ದೇಖಾ ಹಾಗೂ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.