ಬೆಳಗಾವಿ: ಸಾವರ್ಕರ್ ಫೊಟೋ ವಿವಾದ ಕುರಿತಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆಯ ಸಭಾಂಗಣದಲ್ಲಿನ ಸಾವರ್ಕರ್ ಭಾವಚಿತ್ರ ತೆರವು ಮಾಡುವ ಸಂಬಂಧ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಸ್ಪಟನೆ ನೀಡಿರುವ ಸ್ಪೀಕರ್ ಖಾದರ್, ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಪ್ರಸ್ತಾವ ಬಂದಿಲ್ಲ. ಬಂದರೆ ಆಗ ಪರಿಶೀಲನೆ ನಡೆಸಬಹುದು ಎಂದರು. ಸಂವಿಧಾನ ಬದ್ಧವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಅವರು ನಿಲುವು ವ್ಯಕ್ತಪಡಿಸಿದರು.