ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ-ರಾಮ್-ಜಿ) ಯೋಜನೆ ಬಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ವಿಬಿ.ಜಿ.ರಾಮ್.ಜಿ. ಉದ್ಯೋಗ ಖಾತರಿ ಕಾಯ್ದೆಯಲ್ಲಿನ ತಿದ್ದುಪಡಿಗೆ ಸಂಬಂದಪಟ್ಟ ವಾಸ್ತವಿಕ ಅಂಶಗಳನ್ನು ತೆರೆದಿಟ್ಟರು. ಯೋಜನೆಗಳಲ್ಲಿನ ಪಾರದರ್ಶಕತೆ ಕಾಪಾಡಿಕೊಳ್ಳುವಲ್ಲಿ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಅಗತ್ಯ ಪರಿಷ್ಕರಣೆ ತರುವುದು ಮೊದಲಿನಿಂದಲೂ ನಡೆದಪದ್ದತಿ. ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ನರೇಗಾ (MGNREGA) ಯೋಜನೆಯಲ್ಲಿದ್ದ ಹತ್ತಾರು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನರೇಗಾಯೋಜನೆಗೆ ಜನೋಪಯೋಗಿ ತಿದ್ದುಪಡಿ ತಂದಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹೊಸ ಕಲ್ಪನೆಯೊಂದಿಗೆ ಈ ಯೋಜನೆಗೆ ಡಿಸೆಂಬರ್2025ರಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ತಿದ್ದುಪಡಿ ತರಲಾಗಿದೆ ಎಂದವರು ವಿವರಿಸಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿನ ಉದ್ಯೋಗ ಖಾತರಿ ಕಾಯ್ದೆಯ / ಯೋಜನೆಯ ಗತಕಾಲದ ಇತಿಹಾಸ ತೆರದಿಟ್ಟರು. ಭಾರತದಲ್ಲಿ ಉದ್ಯೋಗ ಖಾತರಿಯ ಬಗ್ಗೆ ಇರುವ ಶಾಸನ ಇದೇ ಪ್ರಥಮ ಬಾರಿಗೆ ತಿದ್ದುಪಡಿಯಾಗಿಲ್ಲ ಪ್ರಥಮ ಬಾರಿಗೆ ಹೆಸರು ಬದಲಾಗಿಲ್ಲ- ಇವು ಹತ್ತಾರು ಮಜಲುಗಳಲ್ಲಿ ಬದಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು. ಭಾರತದ ಕೂಲಿ ಉದ್ಯೋಗ ಉಪಕ್ರಮಗಳು ಹಲವು ಹಂತಗಳ ಮುಂದುವರೆದಿದೆ ಎಂದರು.
1860-1947 ರ ದಶಕಗಳಲ್ಲಿ ಮೂಲಕ ಭಾರತೀಯ ಕ್ಷಾಮ ಸಂಹಿತೆಗಳು (1880)- ಪರಿಹಾರ ಕಾರ್ಯವನ್ನು ಸಾಂಸ್ಥಿಕ ಗೊಳಿಸುವುದು- ಕೊರತೆಪರಿಹಾರ ಆಹಾರಕ್ಕಾಗಿ ಕೆಲಸದ ಆರಂಭಿಕ ಕಾರ್ಯ ವಿಧಾನಗಳನ್ನು ನಡೆಸಲಾಗುತ್ತಿತ್ತು. 1947-1970ರ ದಶಕ- ಸ್ವಾತಂತ್ರ್ಯ ನಂತರದಲ್ಲಿ ಉದ್ಯೋಗ ಖಾತರಿಯಂತ ಯೋಜನೆ ಮೇಲೆ ಆರಂಭಿಕ ಪ್ರಯೋಗಗಳು ನಡೆದಿತ್ತು 1960-61ರಲ್ಲಿ ಗ್ರಾಮೀಣ ಮಾನವ ಶಕ್ತಿ ಕಾರ್ಯಕ್ರಮ (ಆರ್. ಎಮ್. ಪಿ.) 1971 ರಲ್ಲಿ ಗ್ರಾಮೀಣ ಉದ್ಯೋಗಕ್ಕಾಗಿ ಕ್ಯಾಶ್ ಸ್ಕಿಮ್-ಇವುಗಳು ಆರಂಭಿಕ ಕಾರ್ಯಕ್ರಮಗಳಾಗಿತ್ತು ಎಂದು ವಿ.ಸೋಮಣ್ಣ ಮಾಧ್ಯಕ್ಕೆ ವರದಿ ನೀಡಿದ್ದಾರೆ.
ಮಹಾರಾಷ್ಟ್ರ ಉದ್ಯೋಗ ಖಾತರಿ ಯೋಜನೆ : 1977 ರಲ್ಲಿ ಮಹಾರಾಷ್ಟ್ರ ಉದ್ಯೋಗ ಖಾತರಿ ಕಾಯ್ದೆ ಮೊದಲ ಶಾಸನ ಬದ್ಧ ಖಾತರಿ ಯೋಜನೆ ಇದಾಗಿತ್ತು. ಪ್ರಮುಖ ಬದಲಾವಣೆ ಘಟ್ಟವಾಗಿ ಪರಿಣಿಮಿಸಿತ್ತು. 1980-1990ರ ಅವಧಿಯಲ್ಲಿ ಯೋಜನೆಗಳ ರಾಷ್ಟ್ರೀಯ ವಿಸ್ತರಣೆ ಮತ್ತು ಬಲವರ್ಧನೆಯ ಉದ್ದೇಶದ ಮೇಲೆ ಹೊಸ ರೂಪ ಪಡೆದುಕೊಂಡಿತ್ತು; 1980ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ (ಎನ್.ಆರ್.ಇ.ಪಿ), 1983 ರಲ್ಲಿ ಗ್ರಾಮೀಣ ಭೂರಹಿತ ಉದ್ಯೋಗ ಖಾತರಿ ಕಾರ್ಯಕ್ರಮ (ಆರ್.ಎಲ್.ಇ.ಜಿ.ಪಿ), 1989ರಲ್ಲಿ ಜವಾಹರ್ ರೋಜಗಾರ್ ಯೋಜನೆ (ಜೆ.ಆರ್.ವೈ), 1993ರಲ್ಲಿ ಉದ್ಯೋಗ ಭರವಸೆ ಯೋಜನೆ (ಇ.ಎ.ಎಸ್.) ಕಾರ್ಯಕ್ರಮಗಳ ಮುಖೇನ ಉದ್ಯೋಗ ಖಾತರಿ ಯೋಜನೆ ಹೊಸ ರೂಪ ಪಡೆದುಕೊಂಡಿತ್ತು ಎಂದು ವಿ. ಸೋಮಣ್ಣ ತಿಳಿಸಿದರು.
2000-2004ರ ಅವಧಿ – ಪರಿವರ್ತನೆಯ ದಶಕ ಯೋಜನೆಗಳ ವಿಲೀನ ಮತ್ತು ಹಕ್ಕುಗಳ ಚಳವಳಿ ಎಂದು ಹೇಳಲ್ಪಟ್ಟಿದೆ. 2001ರಲ್ಲಿ ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ (ಎಸ್.ಜಿ.ಆರ್.ವೈ) 2004ರಲ್ಲಿ ಕೆಲಸಕ್ಕಾಗಿ ರಾಷ್ಟ್ರೀಯ ಆಹಾರ ಕಾರ್ಯಕ್ರಮ ಇವುಗಳು ಕಾಲೋಚಿತ ನಿರುದ್ಯೋಗ ಮತ್ತು ಆಹಾರ ಭದ್ರತೆಯನ್ನು ಉದ್ದೇಶಿಸಿ ಜಾರಿಗೆ ಬಂದವು. ಇವೆಲ್ಲ ಅನುಭವಗಳ ಫಲವಾಗಿ, 2005 ರಿಂದ2024 ರ ಅವಧಿಯಲ್ಲಿ ಮೌಲ್ಯಮಾಪನ ಮತ್ತು ಅನುಷ್ಟಾನದ ಮಾನದಂಡದ ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (NREGA) ಜಾರಿಗೊಂಡಿದ್ದು, 2009ರಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಎಂದು ಮರುನಾಮಕರಣ ಗೊಳಿಸಲಾಗಿದೆ. ಎಂದು ತಿಳಿಸಿದರು .
ವಿಬಿ ಜಿ.ರಾಮ್.ಜಿ. ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿದ ಸಚಿವ ವಿ. ಸೋಮಣ್ಣ, ಕಳೆದ ಎರಡು ದಶಕಗಳಿಂದ ಗ್ರಾಮೀಣ ಉದ್ಯೋಗವು ಭಾರತದ ಸಾಮಾಜಿಕ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿ ಪರಿಣಮಿಸಿದೆ. 2005ರಲ್ಲಿ ಜಾರಿಗೆ ಬಂದಾಗಿನಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಕೂಲಿ ಉದ್ಯೋಗವನ್ನು ಒದಗಿಸುವಲ್ಲಿ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸುವಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಆದಾಗ್ಯೂ ಕಾಲಾನಂತರದಲ್ಲಿ ಗ್ರಾಮೀಣ ಭಾರತದ ರಚನೆ ಮತ್ತು ಉದ್ದೇಶಗಳು ಗಣನೀಯವಾಗಿ ವಿಕಸನಗೊಂಡಿವೆ. ಹೆಚ್ಚುತ್ತಿರುವ ಆದಾಯ, ವಿಸ್ತರಿಸಿದ ಸಂಪರ್ಕ ಸೇವೆಗಳು, ವ್ಯಾಪಕವಾದ ಡಿಜಿಟಲ್ ನುಗ್ಗುವಿಕೆ ಮತ್ತು ವೈವಿದ್ಯಮಯ ಜೀವನೋಪಾಯಗಳು ಗ್ರಾಮೀಣ ಉದ್ಯೋಗದ ಅಗತ್ಯತೆಗಳ ಸ್ವರೂಪವನ್ನು ಬದಲಿಸಿವೆ. ಈ ಹಿನ್ನಲೆಯಲ್ಲಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಿಕಸಿತ ಭಾರತ -ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ಜಾರಿಗೆ ತಂದಿದೆ ಇದನ್ನು ವಿಕಸಿತ ಭಾರತ್ ಜಿ-ರಾಮ್.-ಜಿ ಮಸೂದೆ 2025 ಎಂದು ಕರೆಯಲಾಗಿದೆ. ಈ ಮಸೂದೆಯು ನರೇಗಾ ಯೋಜನೆಯ ಸಮಗ್ರ ಶಾಸನಬದ್ದ ಕೂಲಂಕುಷ ಬದಲಾವಣೆಯನ್ನು ಪತ್ರಿನಿಧಿಸುತ್ತದೆ. ಹೊಣೆಗಾರಿಕೆ, ಮೂಲಸೌಕರ್ಯ ಫಲಿತಾಂಶಗಳು ಮತ್ತು ಆದಾಯದ ಭದ್ರತೆಯನ್ನು ಬಲಪಡಿಸುವ ಜೊತೆಗೆ ಗ್ರಾಮೀಣ ಉದ್ಯೋಗಕ್ಕಾಗಿ ವಿಕಸಿತ ಭಾರತ2047ರ ದೀರ್ಘಕಾಲಿನ ದೃಷ್ಟಿಕೋನದಿಂದ ಈ ಯೋಜನೆಯನ್ನು ಸಂಯೋಜಿಸಲಾಗಿದೆ. ಇದು ನಮ್ಮ ದೇಶದಲ್ಲಿ ಉದ್ಯೋಗ ಖಾತರಿ ಕಾಯ್ದೆ ನಡೆದು ಬಂದದಾರಿ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಹಾಗಾದರೆ, ಯಾಕೆ ಮೋದಿ ಸರ್ಕಾರ ನರೇಗಾ ಕಾಯಿದೆಯಲ್ಲಿ ಅಮೂಲಾಗ್ರ ಜನಪರ ಬದಲಾವಣೆ ತಂದಿದೆ. ಭಾರತದಲ್ಲಿ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳು ಐತಿಹಾಸಿಕವಾಗಿ ಸಾಮಾಜಿಕ ಮತ್ತು ಆರ್ಥಿಕರಚನೆಯಲಿ ನಿರ್ಣಾಯಕ ಪಾತ್ರವಹಿಸಿದೆ. ದುರ್ಬಲ ಕುಟುಂಬಕ್ಕೆ ಆದಾಯ ಭದ್ರತೆ ಒದಗಿಸುವುದು ಆಸ್ತಿಯ ಸೃಷ್ಟಿ, ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆ. ಸ್ಥಿರತೆ, ದೊಡ್ಡ ಪ್ರಮಾಣದ ಜನ ಸಂಖ್ಯೆ ಸಂಖ್ಯೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಋತು ಮಾನಕ್ಕೆ ಸಂಬಂಧಿಸಿದ ನಿರುದ್ಯೋಗ ಮತ್ತು ಆದಾಯದ ಅಸ್ಥಿರತೆ ನಿರಂತರ ಸವಾಲುಗಳಾಗಿ ಉಳಿದಿವೆ ಎಂದರು.
ನರೇಗಾ ಯೋಜನೆ ದೀರ್ಘಕಾಲಿನ ಪರಿಣಾಮ ದುರ್ಬಲಗೊಂಡಿತ್ತು. ನರೇಗಾ ಹಕ್ಕು ಆಧಾರಿತ ಕಾರ್ಯಕ್ರಮವೆಂದು ಜಾರಿಗೆ ತರಲು ಪ್ರಯತ್ನಿಸಿದ್ರೂ, ಕಾಲಾ ನಂತರದಲ್ಲಿ ವ್ಯವಸ್ಥೆಯ ಹಲವಾರು ನ್ಯೂನತೆಗಳು ಯೋಜನೆ ದಕ್ಷತೆ ಸಿಮಿತಗೊಳಿಸದವು, ಕಳಪೆ ಗುಣಮಟ್ಟ, ಯೋಜನೆಗಳ ಜೊತೆಗೆ ಏಕೀಕರಣದಕೊರತೆ, ತಾತ್ಕಾಲಿಕ ರಸ್ತೆಗಳು, ಅಪೂರ್ಣವಾದ ಜಲರಚನೆಗಳು, ಯೋಜಿತವಲ್ಲದ ಮಣ್ಣಿನ ಕೆಲಸಗಳು ಸಾಮಾಜಿಕ ಹಾಗೂ ಆರ್ಥಿಕ ಆದಾಯವನ್ನು ಒದಗಿಸುವಲ್ಲಿ ವಿಫಲವಾದವು. ಬ್ರಷ್ಟಾಚಾರ, ಹಣಕಾಸಿನ ಕೊರತೆ, ನಕಲಿಜಾಬ್ ಕಾರ್ಡ್, ಕೃತಿಮ ಫಲಾನುಭವಿಗಳು, ಕಾರ್ಮಿಕರ ಭಾಗಶ: ಪಾವತಿ, ದುರ್ಬಲ ಮೇಲ್ವಿಚಾರಣೆ, ದುರ್ಬಲ ಸಾಮಾಜಿಕ ಹೊಣೆಗಾರಿಕೆ, ಕಾನೂನು ಬದ್ಧ ಅರ್ಹತೆಗಳ ಪರಿಣಾಮಕಾರಿಯಲ್ಲದ ಜಾರಿಗೊಳಿಸುವಿಕೆ, 2013ರ ಸಿಎಜಿ ವರದಿ ಪ್ರಕಾರ ಈ ಯೋಜನೆಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆದಿದೆ ಎಂದು ವರದಿಯಾಗಿದೆ. 4.33 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ ಗುರುತಿಸಿತ್ತು. 23 ರಾಜ್ಯಗಳಲ್ಲಿ ವೇತನ ವಿಳಂಬ /ನಿರಾಕರಣೆಯಾಗಿದೆ. ಹಾಗಾಗಿಯೇ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಿಕಸಿತ ಭಾರತ -ಜಿ-ರಾಮ್-ಜಿ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ವಿ. ಸೋಮಣ್ಣ ಭಲವಾಗಿ ಸಮರ್ಥಿಸಿಕೊಂಡರು .
ಯೋಜನೆ ತಿದ್ದುಪಡಿ ಹಾಗೂ ಮಾರ್ಪಾಡು ಬಗ್ಗೆ ಬೇರೆ ಬೇರೆ ಹೇಳಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲವೆಂಬುದು ನನ್ನ ಸಲಹೆ ನೀಡಿ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗದಿರುವುದನ್ನು ಸಹಿಸದ ಪ್ರತಿಪಕ್ಷಗಳು ಈ ಯೋಜನೆಗೆ ಸುಳ್ಳುವದಂತಿಗಳನ್ನು ಹರಡುತ್ತಿದೆ. ವಾಸ್ತವ ಅಂಶಗಳನ್ನು ರೈತರು ಕೂಲಿ ಕಾರ್ಮಿಕರು ಅರಿಯಬೇಕು. ಈ ಯೋಜನೆ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿಲ್ಲ. ಬದಲಾಗಿ ಹತ್ತಾರು ಪ್ರಯೋಜನಗಳನ್ನು ನೀಡಲಾಗಿದೆ. ನರೇಗಾದಲ್ಲಿ 100 ಕೆಲಸದ ದಿವಸಗಳಿತ್ತು. ಜಿ.ರಾಮ್, ಜಿ. ಯಲ್ಲಿ 125 ದಿನಗಳಿಗೆ ಏರಿಸಲಾಗಿದೆ. ನರೇಗಾದಲ್ಲಿ ಯೋಜನೆ ಕಾಮಗಾರಿ ಬೇಡಿಕೆ ಆಧಾರದಲ್ಲಿತ್ತು : ಜಿ.ರಾಮ್. ಜಿ.ಯಲ್ಲಿ-ಕಾಮಗಾರಿ ಟಾರ್ಗೆಟ್ ಆಧಾರದ ಮೇಲೆ ನಡೆಯಲಿದೆ. ನರೇಗಾದಲ್ಲಿ ಟಾರ್ಗೆಟ್ ಇಲ್ಲದ ಕಾರಣ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವಿಲ್ಲವಾಗಿತ್ತು : ಜಿ.ರಾಮ್.ಜಿ. ಯೋಜನೆಯಲ್ಲಿ ಟಾರ್ಗೆಟ್ ಇರುವುದರಿಂದ ಗುರಿ ಸಾಧಿಸದ ಅಧಿಕಾರಿ ಮೇಲೆ ಕ್ರಮ ಜರುಗಿಸಲು ಅವಕಾಶವಿದೆ. ನರೇಗಾದಲ್ಲಿ ಕೂಲಿ ಮತ್ತು ಸಾಮಾಗ್ರಿ ವೆಚ್ಚದ ಪಾವತಿಯಲ್ಲಿ ಸಮಸ್ಯೆಯಿತ್ತು ; ಹೊಸ ಯೋಜನೆಯಲ್ಲಿ centralized payment system ಇರುವುದರಿಂದ ಪಾವತಿ ಸಮಸ್ಯೆಗೆ ತೆರೆ ಎಳೆಯಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು .
ಗ್ರಾಮ ಪಂಚಾಯತಿ ಅಧಿಕಾರ ಮೊಟಕು ಗೊಳಿಸಲಾಗಿದೆಯೆಂಬ ಸುಳ್ಳುವದಂತಿಗೆ ಸ್ಪಷ್ಟನೆ ನೀಡಿದ ವಿ. ಸೋಮಣ್ಣ, ಜಿ.ರಾಮ್. ಜಿ. ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳೆ ಕೇಂದ್ರ ಬಿಂದುಗಳಾಗಿವೆ. ಪಂಚಾಯಿತಿಗಳನ್ನು ವಿಕಸಿತ ಗ್ರಾಮ ಪಂಚಾಯಿತಗಳನ್ನಾಗಿಸಲು ಸಹಕಾರಿ. ನರೇಗಾದಲ್ಲಿ ಇದ್ದ ಏ ಕೇಂದ್ರಿಕೃತ ಪದ್ದತಿ ಜಿ.ರಾಮ.ಜಿ. ಯೋಜನೆಯಲ್ಲಿ ಸಂಘಟಿತ / ಕೇಂದ್ರಿಕೃತ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ಜಿ.ರಾಮ್. ಜಿ. ಯೋಜನೆಯಲ್ಲಿ ಪಂಚಾಯತಿ ಯೋಜನೆಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಯೋಜಿಸಲು ಅವಕಾಶ ಮಾಡಿಕೊಡಲಾಗಿದೆ. ಜಿ.ರಾಮ.ಜಿ. ಯೋಜನೆಯನ್ನು ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯೊಂದಿಗೆ ಹೊಂದಾಣಿಕ ಮಾಡುವ ಒಂದು ಹೊಸ ಕಲ್ಪನೆಯನ್ನು ಹೊಂದಲಾಗಿದೆ. ಇದರಿಂದ ಕಾಮಗಾರಿ ತ್ವರಿತವಾಗಿ ಅನುಷ್ಠಾನಗೊಳಿಸಲು ಸಹಕಾರಿ, ಗ್ರಾಮೀಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಜಿ.ರಾಮ. ಜಿ. ಯೋಜನೆಯಲ್ಲಿ 125 ದಿವಸಗಳ ಉದ್ಯೋಗ ಖಾತರಿ ಇರುವುದರಿಂದ ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಡೆಗಟ್ಟ ಬಹುದಾಗಿದೆ. ಜಿ.ರಾಮ್. ಜಿ. ಯೋಜನೆಯಲ್ಲಿ ಕೂಲಿ ಪಾವತಿಯನ್ನು ವಾರಕ್ಕೆ ಒಮ್ಮೆ ಅಥವಾ ಗರಿಷ್ಟ 14 ದಿವಸಗಳ ಒಳಗೆ ಕಡ್ಡಾಯವಾಗಿ ಪಾವತಿಸಲು ಅವಕಾಶ ಮಾಡಲಾಗಿದೆ. ಈ ಮೊದಲು ಕಾಮಗಾರಿಗಳನ್ನು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿದೆಯೇ ಇಲ್ಲವೇ ಎಂದು ಪರಿಗಣಿಸದೇ ಕಾಮಗಾರಿಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಕಾಮಗಾರಿ ವಿಳಂಬವಾಗುತ್ತಿತ್ತು. ಜಿ.ರಾಮ್. ಜಿ. ಯೋಜನೆಯಡಿ “ಏಕಸಿತ ಗ್ರಾಮ ಪಂಚಾಯತಿ ಯೋಜನೆ” ಎಂದು ತಯಾರಿಸಿ ಕಾಮಗಾರಿಗಳನ್ನು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಒಗ್ಗೂಡಿಸಲಾಗುವುದು. ನಂತರ ಇದನ್ನು ಗುಞಚುಣಚಿ ಇಚಿಡಿಚಿಣ National Rural Infrastructure Stackನಲ್ಲಿ ಸೇರಿಸುವದರಿಂದ ಕಾಮಗಾರಿಗಳು ನಕಲು ಆಗುವುದನ್ನು ತಡೆಯುವುದು ಮತ್ತು ಬ್ರಷ್ಟಾಚಾರ ನಿಯಂತ್ರಣ. ಸಮುದಾಯ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಈ ಮೊದಲು ಇದ್ದ 6% ನಿಂದ 9%ಗೆ ಏರಿಸಲಾಗಿದೆ. ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ‘ಸಮಯಕ್ಕೆ ಸರಿಯಾಗಿ ಪಾವತಿಯಾಗಲಿದೆ. ಪ್ರತಿ ಮನೆಯ ಸರಾಸರಿ ಕೂಲಿ ದಿನಗಳು 2014ರಲ್ಲಿ 45.9 ದಿನಗಳು ಇದ್ದರೆ, ಈಗ 50.4 ದಿನಗಳಾಗಿದೆ ಎಂದು ಗಮನಸೆಳೆದರು.
ಜಿ.ರಾಮ್.ಜಿ. ಯೋಜನೆಯಿಂದ ರಾಜ್ಯದ ಆರ್ಥಿಕ ಪರಿಸ್ತಿತಿಯ ಮೇಲೆ ಹೊಡೆತ ಬೀಳುತ್ತದೆಯೆಂಬ ಸುಳ್ಳು ಆರೋಪವನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದ ಕಾಂಗ್ರೇಸ್ ನಾಯಕರು ಕೆಲವು ಅಂಕಿ ಅಂಶಗಳನ್ನು ಗಮನಿಸಬೇಕು. ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ರೂ ಕೂಡ 2011ರಲ್ಲಿ 40 ಸಾವಿರ ಕೋಟಿ ಇದ್ದ ಬಜೆಟ್ ಗಾತ್ರವನ್ನು 2012-13ರಲ್ಲಿ 33 ಸಾವಿರ ಕೋಟಿಗೆ ಇಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಇದರ ಬಜೆಟ್ 2.86 ಲಕ್ಷ ಕೋಟಿಗೆ ಏರಿದೆ. ಎಸ್. ಬಿ. ಐ. ವರದಿ ಪ್ರಕಾರ ರಾಜ್ಯಗಳಿಗೆ ಸರಾಸರಿ 17 ಸಾವಿರ ಕೋಟಿ ಬಜೆಟ್ ಹೆಚ್ಚಳವಾಗಿದೆ. 2025-26ರ ಆರ್ಥಿಕ ವರ್ಷದಲ್ಲಿ ನರೇಗಾದಲ್ಲಿ ದಿನಗೂಲಿ ರೂ.349 ನ್ನು ರೂ.370ಕ್ಕೆ ಏರಿಸಲಾಗಿದೆ. 2014ರಲ್ಲಿ ಒಟ್ಟು ಕೆಲಸದ ದಿವಸಗಳು 1660 ಕೋಟಿ ಇತ್ತು, ಮೋದಿ ಸರ್ಕಾರದ ಅವಧಿಯಲ್ಲಿ ಒಟ್ಟು ಕೆಲಸದ ಅವಧಿ 3210 ಕೋಟಿಗೆ ತಲುಪಿದೆ. 2014ರಲ್ಲಿ ಪೂರ್ಣಗೊಂಡ ಒಟ್ಟು ಕಾಮಗಾರಿಗಳು 1.53 ಲಕ್ಷ, ಮೋದಿ ಸರ್ಕಾರದ ಅವಧಿಯಲ್ಲಿ 8.62 ಲಕ್ಷಕ್ಕೆ ತಲುಪಿದೆ. ಮಹಿಳೆಯರ ಭಾಗವಹಿಸುವಿಕೆ ಶೇ 48 ರಿಂದ ಶೇ 57ಕ್ಕೆ ಏರಿದೆ. 2025ರಲ್ಲಿ ಈ ಯೋಜನೆಗೆ ರೂ.85334 ಕೋಟಿ ವೆಚ್ಚ ಮಾಡಲಾಗಿದ್ದು. ಇದರಲ್ಲಿ 5.78 ಕೋಟಿ ಮನೆಗಳ ಅರ್ಹ ವ್ಯಕ್ತಿಗಳಿಗೆ ಉದ್ಯೋಗ ನೀಡಲಾಗಿದೆ. ದೇಶದ 18 ರಾಜ್ಯಗಳು ಉತ್ತಮ ಸಾಧನೆತೋರಿದೆ. ರಾಜ್ಯಗಳಲ್ಲಿ ಅಧ್ಯಯನ ನಡೆಸಿದಾಗ ಇದೇ ಬಜೆಟ್ನಲ್ಲಿ 6.64 ಕೋಟಿ ಮನೆಗಳ ಆರ್ಹವ್ಯಕ್ತಿಗಳಿಗೆ ಉದ್ಯೋಗ ನೀಡಬಹುದಾಗಿತ್ತು. ರಾಜ್ಯ ಸರ್ಕಾರಗಳು ಹೆಚ್ಚಿನ ಆಶಕ್ತಿತೋರಿಲ್ಲ. ಆದ್ದರಿಂದ ನರೇಗಾ ಯೋಜನೆ ಭಾಧಿತಗೊಂಡಿದೆ. ಬ್ರಷ್ಟಾಚಾರ ನಡೆದಿರಬಹುದು. ಮೊದಲು ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಕಾಟಾಚಾರಕ್ಕೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ನಡೆಯಲಿದೆ. ಮತ್ತು ಇದರ ವರದಿಯನ್ನು ಡಿಜಿಟಲ್ ಎವಿಡೆನ್ಸ್ ಆಗಿ ಪರಿಗಣಿಸಿ ಸಾರ್ವಜನಿಕ ವ್ಯವಸ್ಥೆಯಡಿ ಇಡಲಾಗುವುದು. ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಈ ಯೋಜನೆಗ ಸಂಬಂಧಿಸಿದಂತೆ ಕೌನ್ಸಿಲ್ಗಳು ಮತ್ತು ಸ್ಟೀರಿಂಗ್ ಕಮೀಟಿಗಳು ಕಾರ್ಯನಿರ್ವಹಿಸಲಿದ್ದು, ಇವು ಯೋಜನೆ ಪರಿಣಾಮಕಾರಿ ಅನುಷ್ಟಾನದ ಕುರಿತು ಗಮನಹರಿಸಲಿವೆ ಎಂದರು.



















































