ಶಿವಮೊಗ್ಗ: ಗ್ರಾಮ ಪಂಚಾಯತಿ ಗಳ ವ್ಯಾಪ್ತಿಯಲ್ಲಿ, ವಸತಿ ಯೋಜನೆಯ, ಅರ್ಹ ಫಲಾನುಭವಿಗಳ ಆಯ್ಕೆಗೆ, ನಿವೇಶನ ಹಕ್ಕಪತ್ರ ಬದಲಿಗೆ, ಮನೆಯ ಡಿಮ್ಯಾಂಡ್ ದಾಖಲೆ ಮಾನ್ಯ ಮಾಡುವಂತೆ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಮನವಿ ಮಾಡಿದ್ದಾರೆ.
ಈ ಕುರಿತು, ವಸತಿ ಸಚಿವ ಸೋಮಣ್ಣ ನವರಿಗೆ, ಪತ್ರ ಬರೆದು ವಿನಂತಿಸಿರುವ ಗೃಹ ಸಚಿವರು, ಗ್ರಾಮಾಂತರ ಪ್ರದೇಶದಲ್ಲಿ, ವಸತಿ ರಹಿತರಿಗೆ, ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು ವಸತಿರಹಿತ ಬಡಜನರಿಗೆ ಮನೆ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಪ್ರಸ್ತುತ ನಿಯಾಮಾ ವಳಿಗಳ ಪ್ರಕಾರ ಫಲಾನುಭವಿ ಯಾಗಲು ನಿವೇಶನ ಹಕ್ಕುಪತ್ರ ದಾಖಲೆ ಹೊಂದಿರುವುದು ಕಡ್ಡಾಯವಾಗಿದೆ, ಇದರಿಂದ ವಸತಿರಹಿತ ಬಡ ಜನತೆಗೆ ಮನೆ ಮಂಜೂರು ಮಾಡಲಾಗುತ್ತಿಲ್ಲ, ಎಂದು ಸಚಿವರು ಹೇಳಿದ್ದಾರೆ.
ಈ ಕಾರಣದಿಂದ ನಿಯಮಾವಳಿ ಗಳನ್ನು ಪರಿಷ್ಕರಿಸಲು ಅಗತ್ಯವಿದೆ, ಎಂದು ಸಚಿವರು, ಪ್ರತಿಪಾದಿಸಿದ್ದಾರೆ.