ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಭಾರತೀಯ ಬಣ ಗೆದ್ದರೆ ರಾಹುಲ್ ಪ್ರಧಾನಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ‘ಇಂಡಿಯಾ’ ಒಕ್ಕೂಟದ ನಾಯಕರೂ ಆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ನಡುವೆ ‘ಇಂಡಿಯಾ’ ನಿಲುವು ಬಗ್ಗೆ ಸ್ಪಷ್ಟನೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕರೂ ಆದ ಅರವಿಂದ್ ಕೇಜ್ರಿವಾಲ್,
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಇದೇ ವೇಳೆ, ಅರವಿಂದ್ ಕೇಜ್ರವಾಲ್ ಮುಂದಿನ ಪ್ರಧಾನಿಯಾಗಬಹುದು ಎಂಬ ಮಾತುಗಳೂ ಹರಿದಾಡುತ್ತಿವೆ ಎಂದು ಗಮನಸೆಳೆದಾಗ, ತಮಗೂ ಪ್ರಧಾನಿಯಾಗುವ ಉದ್ದೇಶ ಇಲ್ಲ. ಆದರೆ, ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ಮಾತ್ರ ‘ಇಂಡಿಯಾ’ ಒಕ್ಕೂಟದ ಏಕೈಕ ಗುರಿಯಾಗಿದೆ ಎಂದರು.