ಸ್ಯಾಂಡಲ್‍ವುಡ್‍ನ ಪವರ್‍ಸ್ಟಾರ್ ಅಂದ್ರೆ ಅಂದು ಪುನೀತ್ ರಾಜ್‍ಕುಮಾರ್ .. ಅಪ್ಪು ಅಂತನೇ ಅಭಿಮಾನಿಗಳ ಮನಸ್ಸು ಕದ್ದಿರೋ ಪವರ್ ಸ್ಟಾರ್ ಸಿಂಪಲ್ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತು ., ಚಿಕ್ಕ ವಯಸ್ಸಿನಿಂದಲೇ ಅಭಿನಯ ಕ್ಷೇತ್ರದಲ್ಲಿ ಮಿಂಚಿರೋ ಪುನೀತ್‍ಗೆ ತನ್ನದೇ ಆದ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ಅವರಿಗಾಗಿ ಸ್ಪೆಷಲ್ ಗಿಫ್ಟ್ ನೀಡ್ತಿದ್ದಾರೆ ಪುನೀತ್ ರಾಜ್‍ಕುಮಾರ್ .
ಇದೀಗ ಅಭಿಮಾನಿಗಳಿಗಾಗಿ , ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಅಜಾತ ಶತ್ರು ಎಂಬ ಪುನೀತ್ ಜೀವನಾಧಾರಿತ ಕಿರುಚಿತ್ರ ನಿರ್ಮಾಣಗೊಳ್ಳುತ್ತಿದೆ . ತೇಜಸ್ಸ್ ರಂಗನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇನ್ನು ಈ ಸಿನಿಮಾದ ಬಗ್ಗೆ ಪುನೀತ್ ಕುಮಾರ ಸಂಬಂಧಿ ಧಿರೇನ್ ರಾಜ್‍ಕುಮಾ ಪೋಸ್ಟರ್‍ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮಾಡೋದರ ಮೂಲಕ ತಂಡಕ್ಕೆ ಶುಭ ಹಾರೈಸಿದ್ದಾರೆ . ಇನ್ನು ಈ ಕಿರುಚಿತ್ರಪುನೀತ್ ರಾಜ್ ಕುಮಾರ್ ಜೀವನ ಹಾಗೂ ಅವರ ಸಾಮಾಜಿಕ ಕಾರ್ರಗಳ ಕುರಿತಾದ ಕಥೆಯಾಗಿದ್ದು ಅಪ್ಪು ಅಭಿಮಾನಿಗಳ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅಜಾತಶತ್ರುಕಿರುಚಿತ್ರವನ್ನು ಮಾರ್ಚ್ 17 ರ ಪುನೀತ್ ಹುಟ್ಟುಹಬ್ಬದಂತೆ ರಿಲೀಸ್ ಮಾಡಲಿದ್ದಾರೆ .