ಇಂಫಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಮಣಿಪುರ ಸರ್ಕಾರ ಕೊನೆಗೂ ಅನುಮತಿ ನೀಡಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಹೆಚ್ಚು ಜನರು ಸೇರಬಾರದು ಎಂಬ ಷರತ್ತನ್ನು ಸರ್ಕಾರ ವಿಧಿಸಿದೆ.
ಇಂಫಾಲ್‌ನ ಕಾಂಗ್‌ಜೆಬಂಗ್ ಮೈದಾನದಿಂದ ಜನವರಿ 14ರಂದು ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಸಂಬಂಧ ಅನುಮತಿ ಕೋರಿ ಕಾಂಗ್ರೆಸ್ ಮನವಿ ಮಾಡಿದ ಎಂಟು ದಿನಗಳ ನಂತರ ಮಣಿಪುರ ಸರ್ಕಾರ ಯಾತ್ರೆಗೆ ಅವಕಾಶ ನೀಡಿದೆ.
ಯಾವುದೇ ಅಹಿತಕರ ಘಟನೆ ನಡೆಯಬಾರದು ಮತ್ತು ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಯಾತ್ರೆಯ ಕಾರ್ಯಕ್ರಮ ನೆರವೇರಬೇಕು ಎಂದು ಸರ್ಕಾರ ಹೇಳಿದೆ.


























































