ನವದೆಹಲಿ: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ಹಾಗೂ ಅಶೋಕ್ ಹಾಲ್ಗಳಿಗೆ ಮರುನಾಮಕರಣ ಮಾಡುವ ಮೂಲಕ ಬ್ರಿಟೀಷರ ಕಾಲದ ಹೆಸರು ನೇಪಥ್ಯಕ್ಕೆ ಸರಿದಿದೆ.
ರಾಷ್ಟ್ರಪತಿ ಭವನದೊಳಗಿನ ಎರಡು ಚಾರಿತ್ರಿಕ ಸಭಾಂಗಣಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ದರ್ಬಾರ್ ಹಾಲ್ಗೆ ಗಣತಂತ್ರ ಮಂಟಪ್ ಎಂದೂ, ಅಶೋಕ್ ಹಾಲ್ ಹೆಸರನ್ನು ಆಶೋಕ ಮಂಟಪ್ ಎಂದೂ ಮರುನಾಮಕರಣ ಮಾಡಿ ಈ ಆದೇಶ ಹೊರಡಿಸಿದ್ದಾರೆ.