ನವದೆಹಲಿ: ಕರ್ನಾಟಕದಿಂದ ನಾಲ್ಕು ಸ್ಥಾನಗಳು ಸೇರಿದಂತೆ ರಾಜ್ಯಸಭೆಯ ಒಟ್ಟು 56 ಸ್ಥಾನಗಳಿಗೆ ದ್ವೈ ವಾರ್ಷಿಕ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಫೆ.27ಕ್ಕೆ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
15 ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವ 56 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು ಅಂದೇ ಲಭ್ಯವಾಗಲಿದೆ.
ಚುನಾವಣೆ ನಡೆಯಲಿರುವ ರಾಜ್ಯವಾರು ಸ್ಥಾನಗಳು:
- ಕರ್ನಾಟಕ – 4 ಸ್ಥಾನ
- ಆಂಧ್ರಪ್ರದೇಶ – 3 ಸ್ಥಾನ
- ಬಿಹಾರ – 6 ಸ್ಥಾನ
- ಛತ್ತೀಸ್ಗಢ – 1 ಸ್ಥಾನ
- ಗುಜರಾತ್ – 4 ಸ್ಥಾನ
- ಹರಿಯಾಣ – 1 ಸ್ಥಾನ
- ಹಿಮಾಚಲ ಪ್ರದೇಶ – 1 ಸ್ಥಾನ
- ಮಧ್ಯಪ್ರದೇಶ – 5 ಸ್ಥಾನ
- ಮಹಾರಾಷ್ಟ್ರ – 6 ಸ್ಥಾನ
- ತೆಲಂಗಾಣ -3 ಸ್ಥಾನ
- ಉತ್ತರ ಪ್ರದೇಶ – 10 ಸ್ಥಾನ
- ಉತ್ತರಾಖಂಡ – 1 ಸ್ಥಾನ
- ಪಶ್ಚಿಮ ಬಂಗಾಳ – 5 ಸ್ಥಾನ
- ಒಡಿಶಾ – 3 ಸ್ಥಾನ
- ರಾಜಸ್ಥಾನ -3 ಸ್ಥಾನ
























































