ಬೆಂಗಳೂರು: ಲೋಕಸಭಾ ಚುನಾವಣೆ ಇದೀಗ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿದೆ. ಕರ್ನಾಟಕದ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು 337 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು ಅಂದು ಒಂದೇ ದಿನ 137 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
- ಚಿಕ್ಕೋಡಿಯಲ್ಲಿ 20 ನಾಮಪತ್ರ,
- ಬೆಳಗಾವಿಯಲ್ಲಿ 21 ನಾಮಪತ್ರ,
- ಬಾಗಲಕೋಟೆಲ್ಲಿ 26 ನಾಮಪತ್ರ,
- ವಿಜಯಪುರದಲ್ಲಿ 21 ನಾಮಪತ್ರ,,
- ಕಲಬುರಗಿಯಲ್ಲಿ 23 ನಾಮಪತ್ರ,
- ರಾಯಚೂರಿನಲ್ಲಿ 12 ನಾಮಪತ್ರ,
- ಬೀದರ್‌ನಲ್ಲಿ 34 ನಾಮಪತ್ರ,
- ಕೊಪ್ಪಳದಲ್ಲಿ 27 ನಾಮಪತ್ರ,
- ಬಳ್ಳಾರಿಯಲ್ಲಿ 11 ನಾಮಪತ್ರ,
- ಹಾವೇರಿಯಲ್ಲಿ 27 ನಾಮಪತ್ರ,
- ಧಾರವಾಡದಲ್ಲಿ 29 ನಾಮಪತ್ರ,
- ಉತ್ತರ ಕನ್ನಡದಲ್ಲಿ 19 ನಾಮಪತ್ರ,
- ದಾವಣಗೆರೆಯಲ್ಲಿ 40 ನಾಮಪತ್ರ,
- ಶಿವಮೊಗ್ಗದಲ್ಲಿ 27 ನಾಮಪತ್ರ
ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಎಪ್ರಿಲ್ 22 ಕೊನೆಯ ದಿನವಾಗಿದೆ.