ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ನವದೆಹಲಿಯಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಕೋರ್ಟ್ 18 ದಿನಗಳ NIA ಕಸ್ಟಡಿಗೆ ಒಪ್ಪಿಸಿದೆ.
ಮುಂಬೈ ದಾಳಿಯ ಸೂತ್ರದಾರ ಎನ್ನಲಾದ ತಹವ್ವೂರ್ ರಾಣಾನನ್ನು ಅಮೆರಿಕಾವನ್ನು ಭಾರತಕ್ಕೆ ಒಪ್ಪಿಸಿದೆ. ಗುರುವಾರ ಆತನನ್ನು ಭಾರತಕ್ಕೆ ಕರೆತಂದು ಅಧಿಕೃತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮನವಿಯ ಹಿನ್ನೆಲೆಯಲ್ಲಿ ಕೋರ್ಟ್ ರಾಣಾನನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಿದೆ.