ಬೆಂಗಳೂರು: ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
‘ರಾಜ್ಯದ ಜನಪರ ಚಿಂತನೆ, ಕಾಳಜಿ ಹೊಂದಿದ್ದ ಹಿರಿಯ ನಾಯಕರಾದ ಚೌಡಯ್ಯ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ ಎಂದಿದ್ದಾರೆ.
ಚೌಡಯ್ಯ ಅವರು ಮಂಡ್ಯದ ಶಾಸಕರಷ್ಟೇ ಆಗಿರಲಿಲ್ಲ. ಮಂಡ್ಯದ ಸ್ವಾಭಿಮಾನದ ಪ್ರತೀಕ ಆಗಿದ್ದವರು. ಹೋರಾಟ ಮನೋಭಾವ ಹೊಂದಿದ್ದ ಅವರು ಮಾದೇಗೌಡರ ಜತೆ ಕಾವೇರಿ ಹೋರಾಟದ ಮುಂಚೂಣಿಯಲ್ಲಿದ್ದರು. ಮಂಡ್ಯದ ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 4 ಬಾರಿ ಶಾಸಕರು, 3 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಜನಸೇವೆ ಮಾಡಿದ್ದ ಅವರು, ಅಪಾರ ಬೆಂಬಲಿಗರನ್ನು ಸಂಪಾದಿಸಿದ್ದರು.
ಚೌಡಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.