ಬೆಂಗಳೂರು, ಸೆ. 5: ಬುಧವಾರವಷ್ಟೇ ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಸಂಚಾರಿ ಮದ್ಯ ಸೇವೆ ನೀಡ್ತೀವಿ ಅಂತ ಕುಡುಕರಲ್ಲಿ ಆಸೆ ಹುಟ್ಟಿಸಿದ್ದ ಅಬಕಾರಿ ಸಚಿವರಾದ ಎಚ್ ನಾಗೇಶ್, ಈ ಮಾತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಗುತ್ತಲೇ ಗುರುವಾರದ (ಸೆ.05) ವೇಳೆಗೆ ಮಾತು ಬದಲಿಸಿಬಿಟ್ಟಿದ್ರು. ಇದು ಕುಡುಕರಿಗೆ ನಿರಾಸೆ ಮೂಡಿಸಿದ್ದರೂ ಅವರ ಕುಟುಂಬಗಳಿಗೆ ನೆಮ್ಮದಿಯ ವಿಚಾರವಾಗಿ ಮಾರ್ಪಟ್ಟಿದೆ.
”ಮನೆ ಮನೆ ಮದ್ಯ ಸರಬರಾಜಿಗೆ ನಾನೇ ಅವಕಾಶ ನೀಡುವುದಿಲ್ಲ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಹೆಣ್ಣುಮಕ್ಕಳಿಗೆ ನೋವು ಕೊಡುವ ಕೆಲಸ ಮಾಡುವುದಿಲ್ಲ” ಎಂದು ಎಚ್ ನಾಗೇಶ್ ಸ್ಪಷ್ಟೀಕರಣ ನೀಡಿದರು.
”ಕೆಲವು ತಾಂಡಾಗಳಲ್ಲಿ ಈಗಲೂ ಕಳ್ಳಬಟ್ಟಿ ಬಳಕೆ ಆಗುತ್ತಿದೆ. ನಮ್ಮ ಸರ್ಕಾರವು ಕಳ್ಳಬಟ್ಟಿ ನಿರ್ಮೂಲನೆಯ ಗುರಿ ಹೊಂದಿದೆ. ಈ ಕುರಿತು ತಾಂಡಾಗಳಲ್ಲಿ ಅಭಿಯಾನ ಆರಂಭಿಸುತ್ತೇವೆ” ಎಂದು ತಿಳಿಸಿದರು.























































