ಬೆಂಗಳೂರು: ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ ಮತ್ತು ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಟಿಟಿಡಿ ಒಪ್ಪಿಗೆ ನೀಡಿದೆ ಎಂದು ಟಿಟಿಡಿ ಸದಸ್ಯರಾದ ಎಸ್. ನರೇಶ್ ಕುಮಾರ್ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ 2026 ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಟಿಟಿಡಿ ಆಡಳಿತ ಮಂಡಳಿಯ ಮುಂದೆ ಇಡಲಾಗಿತ್ತು. ಅದಕ್ಕೆ ಆಡಳಿತ ಮಂಡಳಿಯು ತನ್ನ ಒಪ್ಪಿಗೆ ನೀಡಿದೆ ಎಂದರು ಅವರು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದಿಂದ ಜಾಗ ಮಂಜೂರು ಆದ ಬಳಿಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದರು.
ಇದೇ ವೇಳೆ ಟಿಟಿಡಿ ದೇವಸ್ಥಾನದ 2026ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಯನ್ನು ಟಿಟಿಡಿ ಸದಸ್ಯರಾದ ಶ್ರೀ ಎಸ್. ನರೇಶ್ ಕುಮಾರ್ ಮತ್ತು ಟಿಟಿಡಿ ಬೆಂಗಳೂರು ದೇವಸ್ಥಾನದ ಸೂಪರಿಂಟೆಂಡೆಂಟ್ ಜಯಂತಿ ಅವರು ಅನಾವರಣಗೊಳಿಸಿದರು.
ಕ್ಯಾಲೆಂಡರ್ ಬೆಲೆ ₹15 ರಿಂದ ₹450ರ ವರೆಗೆ ವಿವಿಧ ಬೆಲೆಯಲ್ಲಿ ಸಿಗುತ್ತವೆ. ಡೈರಿ ಬೆಲೆ ₹120, 130ರ ಬೆಲೆಯಲ್ಲಿ ಲಭ್ಯವಿವೆ.
ತಿರುಪತಿಯು ಬೌದ್ಧರ ಕ್ಷೇತ್ರವಾಗಿತ್ತು ಎನ್ನುವ ಬೌದ್ಧ ಚಿಂತಕಿ ಜಯದೇವಿ ಗಾಯಕವಾಡ ಅವರ ಹೇಳಿಕೆಗೆ ನರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ತೀರಾ ಹಾಸ್ಯಾಸ್ಪದ. ಹೆಸರು ಮಾಡ್ವೇಕು, ಪ್ರಚಾರ ಪಡ್ಕೋಬೇಕು ಅಂತ ಧರ್ಮನ ಬಳಸ್ಕೋಳ್ಳೋದು ಸರಿ ಅಲ್ಲ ಎಂದರು ನರೇಶ್ ಕುಮಾರ್ ಅವರು ಇದೇ ವೇಳೆ ಅಭಿಪ್ರಾಯಪಟ್ಟರು.