ಜೋರ್ಹತ್ ನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗಿರುತ್ತಿರುವ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಅಸ್ಸಾಂನಲ್ಲಿ ಎಫ್ಐಆರ್ ದಾಖಲಾಗಿದೆ.
ಭಾರೀ ಉತ್ಸಾಹದಿಂದೆಯೇ ಸಾಗುತ್ತಿರುವ ರಾಹುಲ್ ಗಾಂಧಿಯವರ ಎರಡನೇ ಹಂತದ ಪಾದಯಾತ್ರೆ ಇದೀಗ ಅಸ್ಸಾಂ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಅದೇ ಹೊತ್ತಿಕೆ ಪ್ರಕರಣವನ್ನೂ ಎದುರಿಸುವಂತಾಗಿದೆ.
‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಾರ್ಗ ಬದಲಾವಣೆಯಿಂದಾಗಿ ರಾಜ್ಯದ ಜೋರ್ಹತ್ ನಗರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅನುಮತಿಯಂತೆ ಯಾತ್ರೆ ಕೆಬಿ ರಸ್ತೆಯತ್ತ ಸಾಗಬೇಕಿತ್ತು. ಆದರೆ ಬೇರೆ ಮಾರ್ಗದಲ್ಲಿ ಯಾತ್ರೆ ಕೈಗೊಂಡಿದ್ದರಿಂದಾಗಿ ಏಕಾಏಕಿನೂಕುನುಗ್ಗಲು ಉಂಟಾದ ಪರಿಸ್ಥಿತಿ ನಿರ್ಮಾಣವಾಗಿ ಗೊಂದಲ ಉಂಟಾಯಿತು. ಈ ಹಿನ್ನೆಲೆಯಲ್ಲಿ ಯಾತ್ರೆ ಆಯೋಜಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























































