ನವದೆಹಲಿ: 2024ರಲ್ಲಿ ಭಾರತೀಯರು ಸೈಬರ್ ವಂಚನೆ ಪ್ರಕರಣಗಳಲ್ಲಿ ₹22,845.73 ಕೋಟಿ ರೂ. ಕಳೆದುಕೊಂಡಿದ್ದು, ಇದು ಹಿಂದಿನ ವರ್ಷದ ಆಂಕಿಗಳೊಂದಿಗೆ ಹೋಲಿಸಿದರೆ ಶೇ. 206ರಷ್ಟು ಭಾರಿ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು, ಐ4ಸಿ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಮತ್ತು ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ (CFCFRMS) ಪ್ರಕಾರ, ಈ ವರ್ಷ ದೇಶದಾದ್ಯಾಂತ 36.37 ಲಕ್ಷ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದರು.
2023ರಲ್ಲಿ 24.42 ಲಕ್ಷ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ NCRPನಲ್ಲಿ 10.29 ಲಕ್ಷ ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಈ ಸಂಖ್ಯೆ 15.96 ಲಕ್ಷಕ್ಕೆ ಏರಿಕೆಯಾಗಿದ್ದು, ಇದೀಗ 2024ರಲ್ಲಿ 22.68 ಲಕ್ಷಕ್ಕೆ ತಲುಪಿದೆ. ತಲಾ ವರ್ಷ ಶೇ. 127, ಶೇ. 55 ಮತ್ತು ಶೇ. 42ರಷ್ಟು ಏರಿಕೆ ಕಂಡುಬಂದಿದೆ.
“2021ರಲ್ಲಿ ಪ್ರಾರಂಭಿಸಲಾಗಿರುವ CFCFRMS ವ್ಯವಸ್ಥೆಯು ವಂಚನೆ ತಕ್ಷಣ ಜಾಗೃತಗೊಳಿಸಲು ನೆರವಾಗುತ್ತಿದ್ದು, ಈವರೆಗೆ ದಾಖಲಾಗಿರುವ 17.82 ಲಕ್ಷ ದೂರುಗಳಲ್ಲಿ ₹5,489 ಕೋಟಿ ಮೊತ್ತವನ್ನು ವಾಪಸು ಪಡೆಯುವಲ್ಲಿ ಯಶಸ್ವಿಯಾಗಿದೆ,” ಎಂದು ಸಚಿವರು ವಿವರಿಸಿದರು.



























































