ಬೆಂಗಳೂರು, ಜುಲೈ 19: ನಗರಾಭಿವೃದ್ಧಿಯಲ್ಲಿ ದಕ್ಷತೆ, ಜವಾಬ್ದಾರಿ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯನ್ನು ಪುನಾರಚಿಸಿ ಐದು ಮಹಾನಗರ ಪಾಲಿಕೆಗಳನ್ನು ರಚಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ವ್ಯವಸ್ಥೆಯು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅಡಿಯಲ್ಲಿ ಜಾರಿಗೆ ಬರಲಿದೆ.
ಹೊಸ ಪಾಲಿಕೆಗಳ ನಾಮಕರಣ ಮತ್ತು ಗಡಿಗುರುತು ಹೀಗಿರುತ್ತದೆ.
-
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ
-
ಬೆಂಗಳೂರು ಉತ್ತರ ಮಹಾನಗರ ಪಾಲಿಕೆ
-
ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ
-
ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ
-
ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ
ಈ ಐದು ಪಾಲಿಕೆಗಳ ಪ್ರತ್ಯೇಕ ಗಡಿಗಳನ್ನು ಸರ್ಕಾರ ಈಗಾಗಲೇ ಗುರುತಿಸಲಿದೆ. ಸಾರ್ವಜನಿಕರಿಂದ ಈ ಸಂಬಂಧ ಆಕ್ಷೇಪಣೆ ಅಥವಾ ಸಲಹೆಗಳಿಗೂ ಅವಕಾಶ ನೀಡಲಾಗಿದೆ. ಈಗಿನ BBMP ಕೇಂದ್ರ ಕಚೇರಿಯನ್ನು ಆಗಸ್ಟ್ 10ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕೇಂದ್ರ ಕಚೇರಿಯಾಗಿ ಪರಿವರ್ತನೆ ಮಾಡಲಾಗುವುದು. ಆಗಸ್ಟ್ 11ರಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಬಿಲ್ಲು ಮಂಡನೆಯಾಗುವ ಸಾಧ್ಯತೆ ಇದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿ ಈ ಶಿಫಾರಸು ನೀಡಿತ್ತು. ಬಿಬಿಎಂಪಿಯನ್ನು 5ಕ್ಕಿಂತ ಹೆಚ್ಚಿನ ಪಾಲಿಕೆಗಳಾಗಿ ವಿಂಗಡಿಸಬಹುದೆಂಬ ಆಯ್ಕೆಗಳನ್ನೂ ಸಮಿತಿ ಪರಿಶೀಲಿಸಿತ್ತು. ಪ್ರತಿ ಪಾಲಿಕೆಯಲ್ಲಿ 100ರಿಂದ 125 ವಾರ್ಡ್‌ಗಳವರೆಗೆ ಒಳಗೊಂಡಿರಬೇಕೆಂದು ಶಿಫಾರಸು ಮಾಡಲಾಗಿತ್ತು. ಅದರಂತೆ ಸರ್ಕಾರ ಈ ಕ್ರಮ ಕೈಗೊಂಡಿದ್ದು,ಇದರಿಂದ ಬೆಂಗಳೂರು ನಗರಕ್ಕೆ ಹೊಸ ರೂಪು ಸಿಗಲಿಡೇ ಹಾಗೂ ಸ್ಥಳೀಯ ನಿರ್ವಹಣಾ ವ್ಯವಸ್ಥೆ ಸುಧಾರಣೆಗೆ ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.