ಬೆಂಗಳೂರು: ವಿಧಾನಸೌಧದಿಂದ ಅನತಿ ದೂರದಲ್ಲಿರುವ ಕೆ.ಆರ್ ಸರ್ಕಲ್ ಬಳಿ ಬಿಬಿಎಂಪಿ ತ್ಯಾಜ್ಯ ಸಾಗಣೆ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಭಾನುವಾರ (ಜು.28) ರಾತ್ರಿ ಈ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾಗಿದ್ದರಿಂದ ದ್ವಿಚಕ್ರವಾಹನ ಸವಾರರಾದ ಪ್ರಶಾಂತ್ (25), ಬಯ್ಯಣ್ಣಗಿರಿ ಶಿಲ್ಪ ಎಂಬಿಬ್ಬರು ಸಾವನ್ನಪ್ಪಿದ್ದಾರೆ. ಪ್ರಶಾಂತ್, ಶಿಲ್ಪಾ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳು ಎನ್ನಲಾಗಿದೆ.



















































