ನವದೆಹಲಿ: ಭಾರತೀಯ ಜನತಾ ಪಕ್ಷ ಭಾನುವಾರ ದೆಹಲಿಯಲ್ಲಿ ‘ಬಿಜೆಪಿ ಸಂಕಲ್ಪ ಪತ್ರ’ ಹೆಸರಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಡುಗಡೆಯಾಗಿರುವ ಬಿಜೆಪಿ ಸಂಕಲ್ಪ ಪತ್ರದ ಬಗ್ಗೆ ಮಾತನಾಡಿರುವ ಪಕ್ಷದ ರಾಷ್ಟೀಯ ಅಧ್ಯಕ್ಷ ಜೆ ಪಿ ನಡ್ಡಾ, ಮುಂದಿನ ಐದು ವರ್ಷಗಳ ಕಾಲ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶಕ್ಕೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ಸಂಕಲ್ಪ ಪತ್ರ ತಿಳಿಸುತ್ತದೆ ಎಂದು ವಿಶ್ಲೇಷಿಸಿದರು.
ಬಿಜೆಪಿಯ ಸಂಸ್ಥಾಪಕರು ದೇಶಕ್ಕಾಗಿ ಏನನ್ನು ರೂಪಿಸಿದ್ದರು ಎಂಬುದನ್ನು ನಮ್ಮ ಪ್ರಣಾಳಿಕೆಯು ಪ್ರತಿಬಿಂಬಿಸುತ್ತದೆ ಎಂದವರು ಹೇಳಿದರು.