ಪುರಿ; ಒಡಿಶಾದ ಪುರಿಯಲ್ಲಿ ಜಗನ್ನಾಥ ಉತ್ಸವ ವೇಳೆ ಪಟಾಕಿ ದುರಂತ ಸಂಭವಿಸಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಚಂದನ್ ಯಾತ್ರೆ ಆಚರಣೆಯ ಅಂಗವಾಗಿ ನರೇಂದ್ರ ಕೊಳದಲ್ಲಿ ಟ್ರಿನಿಟಿಯ ಚಾಪಾ ಖೇಲಾ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ಆಯೋಜಿಸಲಾದ ಪಟಾಕಿ ಸಿಡಿದು ಕೊಳದಲ್ಲಿನ ಜಲಕ್ರೀಡೆ ವೀಕ್ಷಿಸಲು ಜಮಾಯಿಸಿದ್ದ ಭಕ್ತರ ಮೇಲೆ ಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.