ಮುಂಬೈ: ಅಧಿಕಾರ ದುರ್ಬಳಕೆ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರದ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಕುಟುಂಬದ ವಿರುದ್ದ ಪ್ರಕರಣ ದಾಖಲಾಗಿದೆ.
ಅವರ ತಾಯಿ ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸಿದ ಹಳೆಯ ವಿಡಿಯೋ ವೈರಲ್ ಆಗಿ ಭಾರೀ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್, ತಾಯಿ ಮನೋರಮಾ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
#BREAKING | Controversy deepens as new video shows IAS Puja Khedkar’s mother threatening farmer with gun in Pune#PujaKhedkar #pujakhedkarias #IASPujaKhedkar #IASPoojaKhedkar #PuneNews #Pune pic.twitter.com/PPwXlleHZ0
— Republic (@republic) July 12, 2024
ರೈತರನ್ನು ಬೆದರಿಸಿದ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅನ್ವಯ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಜಾ ಅವರ ತಾಯಿ ಮನೋರಮಾ ಅಂಗರಕ್ಷಕರ ಜೊತೆ ಪಿಸ್ತೂಲ್ ಹಿಡಿದು ರೈತರನ್ನು ಗದರಿಸಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿ ಕುಟುಂಬದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.