ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರದಲ್ಲಿ ಸರ್ಕಾರ ಕಣ್ಣಾಮುಚ್ಚಾಳೆ ಆಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ವೇಳೆ ಕಾಂಗ್ರೆಸ್ ವಿಜೇತ ಅಭ್ಯರ್ಥಿ ನಾಸಿರ್ ಅವರ ಪರವಾಗಿ ಬೆಂಬಲಿಗರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಎಫ್ಎಸ್ಎಲ್ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದರು. ಆದರೆ ವರದಿಯು ಸರ್ಕಾರದ ಕೈ ಸೇರಿದ್ದರೂ ಸತ್ಯಾಂಶವನ್ನು ಬಯಲು ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.
ಈ ಕುರಿತಂತೆ ಅಶೋಕ್ ಟ್ವೀಟ್ ಮಾಡಿ ಸರ್ಕಾರವನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್ಎಲ್ ವರದಿ ಕೈಸೇರಿ 5-6 ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ.
ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ @INCKarnataka ಪಕ್ಷ ನಿಜವಾಗಿಯೂ…
— R. Ashoka (ಆರ್. ಅಶೋಕ) (@RAshokaBJP) February 29, 2024


























































