ಬೆಂಗಳೂರು,ಅ.09: ಸಿಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಪರಪ್ಪರ ಅಗ್ರಹಾರದಲ್ಲಿ ದಾಳಿ ನಡೆಸಿದ್ದಾರೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ 60 ಪೊಲೀಸರ ತಂಡದಿಂದ ದಾಳಿ ನಡೆಸಿ, ಅತ್ಯಧಿಕ ಪ್ರಮಾಣದ ಮಾರಕಾಸ್ತ್ರ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರೇಡ್ ಬಳಿಕ ಮಾತನಾಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ,ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು , ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಆಯುಕ್ತರು ಸೂಚಿಸಿದ್ದಾರೆ..ಹೀಗಾಗಿ ಬೆಳಗ್ಗೆಯೇ ಕಾರಾಗೃಹದ ಮೇಲೆ ದಾಳಿ ಮಾಡಿದ್ದು, ತಪಾಸಣೆ ಮಾಡಲಾಗಿದೆ..ದಾಳಿ ವೇಳೆ 37 ಚಾಕು ಮತ್ತು ಡ್ಯಾಗರ್ ಗಳು ಸಿಕ್ಕಿವೆ..ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪ್ ಗಳು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಅಲ್ಲದೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳು ಈ ವೇಳೆ ಸಿಕ್ಕಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗ್ತಿದೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದು, ಅವ್ರು ಅಲ್ಲಿಂದಲೇ ಅಪರಾಧ ಚಟುವಟಿಕೆ ಮಾಡಲಾಗ್ತಿರೋ ಬಗ್ಗೆ ಮಾಹಿತಿ ಲಭ್ಯವಾಘಿದೆ. ಈ ಹಿನ್ನಲೆ ದಾಳಿ ಮಾಡಬೇಕಾಯ್ತು. ತನಿಖೆಯ ದೃಷ್ಟಿಯಿಂದ ಕೆಲ ವಿಷಯಗಳನ್ನ ಗೌಪ್ಯವಾಗಿಡಬೇಕಾಗುತ್ತೆ.. ಜೈಲು ಸೂಪರ್ಡೆಂಟ್ ಪರಿಶೀಲನೆ ವೇಳೆ ಜೊತೆಗಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತೆ ಎಂಬುದಾಗಿ ಮಾಃಇತಿ ನೀಡಿದರು.