ಬೆಳಗಾವಿ: ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಗೆದ್ದ ಮೂವರು ಕಾಂಗ್ರೆಸ್ ಶಾಸಕರು ಇಂದು ವಿಧಾನಸಭೆಯ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭದ ದಿನದಂದು ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್, ಶಿಗ್ಗಾಂವಿಯ ಯಾಸೀರ್ ಅಹಮದ್ ಖಾನ್ ಪಠಾಣ್, ಸಂಡೂರು ಕ್ಷೇತ್ರದ ಇ.ಅನ್ನಪೂರ್ಣ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಶಾಸಕರ ಪ್ರಮಾಣವಚನ ಮೂಲಕ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಈಗ ಸ್ಪೀಕರ್ ಹೊರತುಪಡಿಸಿ ಆಡಳಿತಾರೂಢ ಕಾಂಗ್ರೆಸ್ ಬಲ 136ಕ್ಕೆ ಏರಿಕೆಯಾಗಿದೆ.