ನಿರ್ಭಾಯಾ ಅತ್ಯಾಚಾರ ಪ್ರಕರಣದಾರೋಪಿಗಳಿಗೆ ಗಲ್ಲು ಶಿಕ್ಷೆಯ ದಿನ ಹತ್ತಿರವಾಗುತ್ತಿದೆ..ಫೆ. 1 ರಂದು ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲಿದ್ದಾರೆ.ಈ ನಿಟ್ಟಿನಲ್ಲಿ ಅವರ ಕೊನೆಯಾಸೆಗಳನ್ನು ಈಡೇರಿಸಲು ಹೆಚ್ಚುವರಿ ಇನ್ಸ್ಪೆಕ್ಟರ್ ಜನರಲ್ ರಾಜ್ ಕುಮಾರ್ ತೀರ್ಮಾನಿಸಿದ್ದು ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳಿಗೆ ಈಡೇರಿಸಬಹುದಾದ ಆಸೆಗಳ ಪಟ್ಟಿಯನ್ನು ಮಾಡುವಂತ ಸೂಚಿಸಿದ್ದಾರೆ.
ಇನ್ನು ಇದಕ್ಕೆ ಬೇಕಾದ ಸಿದ್ದತೆಗಳನ್ನು ನಡೆಸಿದ್ದು .. ಈಗಾಗಲೇ ಆರೋಪಿಗಳಿಗೆ ಪಟ್ಟಿಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಲಾಗಿದೆ.. ಆದ್ರೆ ಖೈದಿಗಳು ಯಾರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ಪ್ರತಿ ಆಸೆ ಪೂರ್ಣಗೊಳಿಸಲು ಸಾಧ್ಯವಿಲ್ಲ .ಆರೋಪಿಗಳು ಲಿಖಿತವಾಗಿ ಪಟ್ಟಿ ನೀಡಿದ್ದಲ್ಲಿ ಜೈಲು ಆಡಳಿತವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಫೆ.1ರಂದು ಬೆಳಗ್ಗೆ 6 ಗಂಟೆಗೆ ಆರೋಪಿಗಳಾದ ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ , ಮುಖೇಶ್ ಕುಮಾರ್ ಸಿಂಗ್ , ಪವನ್‍ರವರನ್ನು ಗಲ್ಲಿಗೇರಿಸಲು ದೆಹಲಿ ನ್ಯಾಯಲಯ ವಾರೆಂಟ್ ಹೊರಡಿಸಿದೆ.