ಕಾರವಾರ: ಕುಮಟಾ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿರುವ ಟ್ಯಾಂಕರ್‌ನಿಂದ ಅನಿಲ ತೆರವುಗೊಳಿಸಲು ಚಿಂತನೆ ನಡೆದಿದೆ.
ಗ್ಯಾಸ್ ಟ್ಯಾಂಕರ್ ಹೆದ್ದಾರಿ ಪಕ್ಕದ ನದಿಗೆ ಬಿದ್ದ ಘಟನೆ ಬುಧವಾರ ನಡೆದಿತ್ತು. ಕುಮಟಾ ಕಡೆಯಿಂದ ಮಂಗಳೂರಿನ ಕಡೆ ಗ್ಯಾಸ್ ಟ್ಯಾಂಕರ್ ಚಲಿಸುತ್ತಿದ್ದು, ಈ ವೇಳೆ ಹೊನ್ಮಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ. ಸುಮಾರು 30 ಟನ್ ಅನಿಲ ಹೊಂದಿರುವ ಈ ಟ್ಯಾಂಕರ್ ದುರಂತ ಸ್ಥಳದಿಂದ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಿದೆ.
ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಈ ಟ್ಯಾಂಕರ್‌ನಿಂದ ನದಿಯಲ್ಲೇ ಅಡುಗೆ ಅನಿಲ ಖಾಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಎಂಆರ್‌ಪಿಎಲ್ ಅಧಿಕಾರಿಗಳ ತಂಡ ಹಾಗೂ ಎನ್‌ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.