ಬೆಂಗಳೂರು: SSLC ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಕಾರವು ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ವಿನೂತನ ಪದ್ಧತಿ ಜಾರಿ ಮಾಡಿದ್ದು, ಈ ವಿದ್ಯಾರ್ಥಿ ಸ್ನೇಹಿ ನಿಲುವಿನಿಂದಾಗಿ ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ರಲ್ಲಿ ಒಟ್ಟು 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಿಕ್ಷಣ ಮುಂದುವರೆಸುವ ಅರ್ಹತೆ ಗಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರೆಗೆ ವರ್ಷಕ್ಕೊಮ್ಮೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಇದು ವಿದ್ಯಾರ್ಥಿಗಳ ಮೇಲೆ ಪರೀಕ್ಷಾ ಒತ್ತಡವನ್ನು ಹೆಚ್ಚಿಸಿ, ಅವರ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿತ್ತು ಜೊತೆಗೆ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮತ್ತೊಂದು ವರ್ಷ ಕಾಯಲಾಗದೆ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಉದಾಹರಣೆಗಳು ಸಾಕಷ್ಟಿದ್ದವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಸರ್ಕಾರವು ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ವಿನೂತನ ಪದ್ಧತಿ ಜಾರಿ ಮಾಡಿದೆ. ನಮ್ಮ ಈ ವಿದ್ಯಾರ್ಥಿ ಸ್ನೇಹಿ ನಿಲುವಿನಿಂದಾಗಿ ಕಳೆದ ಆಗಸ್ಟ್ – ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ರಲ್ಲಿ ಒಟ್ಟು 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಿಕ್ಷಣ ಮುಂದುವರೆಸುವ ಅರ್ಹತೆ ಗಳಿಸಿದ್ದಾರೆ ಎಂದಿದ್ದಾರೆ.
ನಾಡಿನ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಿಮುಖನಾಗದೆ ಗರಿಷ್ಠ ಹಂತದ ವರೆಗೆ ಶಿಕ್ಷಣ ಪಡೆದು, ದೇಶದ ಆಸ್ತಿಯಾಗಬೇಕೆಂಬ ನಮ್ಮ ಉದ್ದೇಶಕ್ಕೆ ದೊರೆತಿರುವ ಈ ಆರಂಭಿಕ ಯಶಸ್ಸು ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಸುಧಾರಣೆಗಳಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರೆಗೆ ವರ್ಷಕ್ಕೊಮ್ಮೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಇದು ವಿದ್ಯಾರ್ಥಿಗಳ ಮೇಲೆ ಪರೀಕ್ಷಾ ಒತ್ತಡವನ್ನು ಹೆಚ್ಚಿಸಿ, ಅವರ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿತ್ತು ಜೊತೆಗೆ ವಾರ್ಷಿಕ ಮತ್ತು ಪೂರಕ… pic.twitter.com/zX0bSEQwcI
— CM of Karnataka (@CMofKarnataka) September 13, 2023