ಚೆನ್ನೈ: ತಮಿಳುನಾಡಿನ ಕೂನುರು ಸಮೀಪ ಸೇನಾ ಹೆಲಿಕಾಪ್ಟರ್ ಪತನಗೊಂಡು ಸೇನಾ ಸರ್ವೋಚ್ಚ ಅಧಿಕಾರಿ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ. ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲಿ ಪಾಲ್ಗೊಳ್ಳಲು ಬಿಪಿನ್ ರಾವತ್ ತೆರಳುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ. ರಾವತ್ ಅವರು ಮೂರು ಸೇನೆಗಳ ಮುಖ್ಯಸ್ಥರಾಗಿದ್ದು ಅವರು ಹುತಾತ್ಮರಾಗಿರುವ ಮಾಹಿತಿಯನ್ನು ವಾಯುಸೇನೆ ಅಧಿಕೃತವಾಗಿ ತಿಳಿಸಿದೆ.
ದುರಂತದಲ್ಲಿ ಹಲವರು ಸಾವನ್ನಪ್ಪಿದ್ದು, ಬಿಪಿನ್ ರಾವತ್ ಸೇರಿದಂತೆ ಮೂವರನ್ನು ರಕ್ಷಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರಾವತ್ ಕೂಡಾ ಚಿಕಿತ್ಸೆ ಫಲಕಾರಿಗದೆ ವಿಧಿವಶರಾಗಿದ್ದಾರೆ.