ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಆರು ಶಿಶುಗಳು ಸಾವನ್ನಪ್ಪಿವೆ.
In a tragic incident, massive fire broke out at a New Born Baby Care Hospital in Delhi’s Vivek Vihar late last night.
12 children were rescued, out of which 6 have died, 1 is on the ventilator and 5 others are admitted to the hospital: Delhi Fire Servicepic.twitter.com/LZcmVypzlT
— Megh Updates 🚨™ (@MeghUpdates) May 26, 2024
ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿರುವ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯಿತು.
ಅವಘಡದಲ್ಲಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ. 11 ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಗಧಗಿಸಿದ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿಯ ಕೆನ್ನಾಲಿಗೆಯ ನಡುವೆ ಸ್ಫೋಟದ ಸದ್ದು ಕೂಡಾ ಕೇಳಿಸುತ್ತಿತ್ತು. ಈ ಘಟನೆಯಿಂದ ಇಡೀ ದೆಹಲಿ ಬೆಚ್ಚಿಬಿದ್ದಿದೆ.