ಕನ್ನಡದವರಲ್ಲದಿದ್ದರೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ, ಕನ್ನಡ ಮಾತನಾಡಿ ಎಲ್ಲರ ಮನಗೆದ್ದಿರುವ ರಾಗಿಣಿ ದ್ವಿವೇದಿ ಸದ್ಯ ಅಧ್ಯಕ್ಷ ಇನ್ ಅಮೇರಿಕಾ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ,.ಈ ನಡುವೆಯೂ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಿ ಎಲ್ಲರ ಗಮನಸೆಳೆದಿದ್ದಾರೆ..ಹೌದು..ಒಂಭತ್ತು ದಿನಗಳ ನವರಾತ್ರಿ ಹಬ್ಬವು ಎಲ್ಲೆಡೆ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಉತ್ತರ ಭಾರತವರಾಗಿರುವ ರಾಗಿಣಿ ಸಹ ವಿಶೇಷ ರೀತಿಯಲ್ಲಿ ಹಬ್ಬದ ಆಚರಣೆ ಮಾಡಿದ್ದಾರೆ. ಮಾಡರ್ನ್ ಲುಕ್ ನಲ್ಲೇ ತುಪ್ಪದ ಬೆಡಗಿ ಹೆಸರು ಮಾಡಿಕೊಂಡಿದ್ದ ರಾಗಿಣಿ, ಹಬ್ಬದ ವೇಳೆ ಅಪ್ಪಟ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ..
ಅಲ್ಲದೆ ನೆರೆಹೊರೆಯ ಮಕ್ಕಳನ್ನು ತಮ್ಮ ನಿವಾಸಕ್ಕೆ ಕರೆದು, ಕನ್ಯಾ ಪೂಜೆಯನ್ನು ನೆರವೇರಿಸಿ,ಹೆಣ್ಣು ಮಕ್ಕಳಿಗೆ ಬಳೆ ತೊಡಿಸಿ ಸಂಭ್ರಮಿಸಿದ್ದಾರೆ..ಹಬ್ಬದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸಿಹಿ ಹಂಚುವ ಫೊಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳವ ಮೂಲಕ ರಾಗಿಣಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.