ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಗಲು-ರಾತ್ರಿ ಏನ್ನದೇ ಸಮೀಕ್ಷೆ ಮಾಡುತ್ತಿರುವ ಅಧಿಕಾರಿ, ನೌಕರರಿಗೆ ವಿನಃಕಾರಣ ನೋಟಿಸ್ ನೀಡಿ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವುದು ಹಾಗೂ ಕಂದಾಯ ಮೌಲ್ಯಮಾಪಕರಾದ ಶ್ರೀನಿವಾಸ್ ರವರನ್ನು ಅಮಾನತ್ತು ಮಾಡಿರುವುದನ್ನ ಖಂಡಿಸಿ ಬೃಹತ್ ಸಭೆ ಏರ್ಪಡಿಸಲಾಗಿತ್ತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿರವರು, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾರವರು, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎ.ಅಮೃತ್ ರಾಜ್ ರವರು ಮಾತನಾಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಪಾಲಿಕೆ ನೌಕರರಿಗೆ ಯಾವುದೇ ಸಮಸ್ಯೆಯಾದಲ್ಲಿ ಹೋರಾಟದ ಮೂಲಕ ನ್ಯಾಯ ಪಡೆಯುವ ಹಕ್ಕು ಇದೆ. ಸಿಬ್ಬಂದಿಗಳ ಕೊರತೆಯ ನಡುವೆ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಅವರನ್ನ ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗಬಾರದು ಎಂದರು.
ಜಿಬಿಎ ಮುಖ್ಯ ಆಯುಕ್ತರು ಮಾತನಾಡಿ ಪ್ರತಿಭಟನೆ, ಹೋರಾಟ ಮಾಡಬೇಡಿ ನಾವು ನಿಮ್ಮ ಜೊತೆಯಲ್ಲಿ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಿ.ಎಸ್.ಷಡಾಕ್ಷರಿ ರವರು ಮಾತನಾಡಿ ಬೆಂಗಳೂರಿನ ಸಮೀಕ್ಷೆ ಕಾರ್ಯದಲ್ಲಿ ಹಲವಾರು ಗೊಂದಲಗಳು ಇವೆ. ಸಮೀಕ್ಷೆಯಿಂದ ಶಾಲೆ, ಕಾಲೇಜು, ಸರ್ಕಾರ, ಬಿಜಿಎ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರ ಕುರಿತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದರು.
ಮೇಲಾಧಿಕಾರಿಗಳ ವಿರುದ್ದ ಅಕ್ರೋಶದಿಂದ ಮಾತನಾಡಬೇಕಾಗಿ ಬಂದಿದೆ. ಮೇಲಾಧಿಕಾರಿಗಳ ಸಮೀಕ್ಷೆ ಮಾಡಿ ಅದರ ಕಷ್ಟ ಏನು ಎಂಬುದು ತಿಳಿಯುತ್ತದೆ. ಲೋಕಸಭಾ, ವಿಧಾನಸಭಾ ಹಲವಾರು ಚುನಾವಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ನೌಕರರು, ಅದರೆ ಇಂತಹ ಕೆಟ್ಟ ಸಮೀಕ್ಷೆ ವ್ಯವಸ್ಥೆಯಿಂದ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಮಾನತ್ತು, ನೋಟಿಸ್ ಕೊಟ್ಟರೆ ಭಯಪಡಬೇಡಿ, ಏನು ಮಾಡಲು ಸಾಧ್ಯವಿಲ್ಲ. 18ನೇ ತಾರೀಖಿನವರಗೆ ಸಮೀಕ್ಷೆ ಮಾಡಿ ಮುಗಿಸಿ ಎಂದು ಹೇಳಿದರು.