ದೆಹಲಿಯ ಜಮಾತ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ ಬೀದರ್ ನ 27 ಜನರ ಪೈಕಿ 11 ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು ಇನ್ನೂ ಹಲವು ಜಿಲ್ಲೆಗಳಲ್ಲಿ ಜಮಾತಿನಲ್ಲಿ ಪಾಲ್ಗೊಂಡಿದ್ದ ಸದಸ್ಯರ ಪೈಕಿ ಎಷ್ಟು ಮಂದಿಗೆ ಈ ಮಹಾಮಾರಿಗೆ ಎಂಬುದು ಆತಂಕಕ್ಕೆ ಕಾರಣವಾಗಿದೆ ಬೀದರ್ ನಲ್ಲಿ ಸಮ್ಮೇಳನಕ್ಕಾಗಿ ನವದೆಹಲಿಗೆ ಸುಮಾರು 27 ಮಂದಿ ಪಾಲ್ಗೊಂಡಿದ್ದರು .
ಸರ್ಕಾರ ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ನೀಡಿದ ಕೂಡಲೇ ದೆಹಲಿಯಿಂದ ಬಂದವರನ್ನು ಪ್ರತ್ಯೇಕವಾಗಿರಿಸಿ ಅವರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಬೆಳಿಗ್ಗೆ ವರದಿ ಬಂದಿದ್ದು 11 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾದೇವರು ಖಚಿತಪಡಿಸಿದ್ದಾರೆ. ಈಗಾಗಲೇ ನಾವು ನಗರದಲ್ಲಿ ಹಾಗೂ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಎಲ್ಲರನ್ನೂ ತಪಾಸಣೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ಜಮಾತ್ ಸಭೆ ಈಗ ದೇಶಾದ್ಯಂತ ಸೋಂಕು ಹರಡುವ ಆತಂಕ ಶುರುವಾಗಿದೆ, ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಇದೊಂದು ಸವಾಲಿನ ಕೆಲಸವಾಗಿದೆ. ಸರ್ಕಾರಕ್ಕೆ ಇದೊಂದು ಗಂಟೆಯಾಗಿತ್ತು ಸೋಂಕು ನಿಯಂತ್ರಣದ ಮುನ್ಸೂಚನೆ ಯ ಲ್ಲಿದ್ದಾಗ ಈ ಹೊಸ ಜಮಾತ್ ಸೋಂಕು ತಲ್ಲಣ ಸೃಷ್ಟಿಸಿದೆ