ನವದೆಹಲಿ: ಲೋಕಸಭಾ ಚುನಾವಣಾ ಕದನ ರಂಗೇರಿರುವಂತೆಯೇ ನೀತಿಸಂಹಿತೆ ಉಲ್ಲಂಘನೆಯ ಪ್ರಕರಣಗಳೂ ಹೆಚ್ಚುತ್ತಿವೆ. ಚುನಾವಣೆ ಘೋಷಣೆಯಾದ ನಂತರ ಈವರೆಗೆ ಸಿ-ವಿಜಿಲ್ ಆ್ಯಪ್ ಮೂಲಕ 79,000 ಕ್ಕೂ ಹೆಚ್ಚು ದೂರು ಸ್ವೀಕರಿಸಲಾಗಿದೆ.
ಈ ಕುರಿತಂತೆ ಶುಕ್ರವಾರ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ ದೂರುಗಳ ಪೈಕಿ ಶೇಕಡಾ 90ರಷ್ಟನ್ನು ಪರಿಹರಿಸಲಾಗಿದೆ ಎಂದಿದೆ. ಅಕ್ರಮ ಹೋರ್ಡಿಂಗ್, ಬ್ಯಾನರ್ಗಳ ಬಗ್ಗೆಯೇ 58,500 ಕ್ಕೂ ಹೆಚ್ಚು ದೂರುಗಳು ಬಂದಿವೆ., ಹಣ, ಉಡುಗೊರೆಗಳ ಬಗ್ಗೆ, ಮದ್ಯ ವಿತರಣೆ ಕುರಿತಂತೆ 1,400 ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.