ಬೆಂಗಳೂರು: ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ಕಾಂಗ್ರೆಸ್ ಸರ್ಕಾರ ನಿರ್ಬಂಧ ಹೇರಲು ಮುಂದಾಗಿದ್ದರೆ, ಮತ್ತೊಂದೆಡೆ ಅಂಬೇಡ್ಕರ್ ಹೆಸರು ಬಳಸಿ ದಲಿತ ಸಂಘಟನೆಗಳನ್ನು ಎತ್ತಿಕಟ್ಟುವ ಸಂಚು ಕೂಡಾ ನಡೆದಿದೆ ಎಂದು ಬಿಜೆಪಿ ಆರೋಪ ಮಾಡಿದೆ. ರಾಷ್ಟ್ರೀಯತೆ, ದೇಶಪ್ರೇಮ ಪದಗಳನ್ನು ಪ್ರಯೋಗಿಸಿ ಕಾಂಗ್ರೆಸ್ ಬಿಜೆಪಿ ನಾಯಕರು ವಾಗ್ಬಾಣವನ್ನೂ ಪ್ರಯೋಗಿಸುತ್ತಿದ್ದಾರೆ. ಇದರಿಂದಾಗಿ, ಪ್ರಸಕ್ತ ರಾಜಕೀಯ ಅಖಾಡದಲ್ಲಿ ‘ಆರೆಸ್ಸೆಸ್ V/s ಅಂಬೇಡ್ಕರ್’ ಸನ್ನಿವೇಶ ಸೃಷ್ಟಿಯಾದರೆ, ನೈಜ ಸತ್ಯವು ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತಿದೆ ಈ ಹಳೆಯ ಫೋಟೋ.
ಈ ಫೋಟೋದಲ್ಲಿ ಇರುವವರು ಬೇರಾರೂ ಅಲ್ಲ, ರಾಜಕೀಯ ಅಖಾಡದಲ್ಲಿ ಎದುರಾಳಿಗಳೆಂದು ಬಿಜೆಪಿಯೇತರ ಮುಖಂಡರಿಂದ ಬಿಂಬಿತವಾಗಿರುವ ನಾಯಕರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋ ಹರಿದಾಡುತ್ತಿದ್ದು ಅಚ್ಚರಿ ಹಾಗೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇದು ಅಸಲಿ ಚಿತ್ರವೇ? ಎಂಬುದನ್ನು ಪೋಸ್ಟ್ ಹಾಕಿದವರೇ ಹೇಳಬೇಕು.
ಈ ಚಿತ್ರದಲ್ಲಿ ಇರುವವರಲ್ಲಿ ಒಬ್ಬರು RSS ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೇವಾರ್. ಅವರ ಹಿಂದೆ ಕುಳಿತವರು ಡಾ.ಅಂಬೇಡ್ಕರ್ ಎಂಬುದು ಈ ಫೋಟೋವನ್ನು ಪೋಸ್ಟ್ ಹಾಕಿದವರ ವಿವರಣೆ.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಇಬ್ಬರೂ ಮೇಧಾವಿಗಳು ದೇಶಹಿತದ ಚಿಂತನೆಯಿಂದಾಗಿ ಅನ್ಯೋನ್ಯವಾಗಿ ಇದ್ದಂತಿದೆ. ಆದರೆ, ರಾಜಕೀಯ ನಾಯಕರ ವಿಶ್ಲೇಷಣೆ ಪ್ರಕಾರ ಇವರಿಬ್ಬರೂ ಪ್ರತಿಸ್ಪರ್ಧಿಗಳು. ಅದೇನೇ ಇದ್ದರೂ ಈ ಪೋಟೊ ಮೂಲಕ RSS ಸಂಸ್ಥಾಪಕ ಮತ್ತು ಸಂವಿಧಾನ ಕರ್ತೃ ಪರಸ್ಪರ ಸ್ನೇಹಿತರೆಂಬುದನ್ನು ಅನಾವರಣ ಮಾಡಿದಂತಿದೆ.
ಈ ಚಿತ್ರ, ಬಹಳ ಹಳೇಯದು ಹಾಗೂ ಬಹಳ rare ಎಂದು ಹೇಳಲಾಗುತ್ತದೆ.
ಈ ಚಿತ್ರದಲ್ಲಿ ಕಾಣುವ ಇಬ್ಬರು ಮಹಾನ್ ವ್ಯಕ್ತಿಗಳು ಯಾರೂ ಗೊತ್ತೇ.
ನಮ್ಮ ಮಹಾ ಜನಸೇವಾ ಸಂಸ್ಥೆ, RSS ನ ಹುಟ್ಟಿಗೆ ಕಾರಣರಾದ ಕೇಶವ ಬಲಿರಾಂ ಹೆಗಡೆವಾರ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದವರು, ಭೀಮ್ ರಾವ್ ಅಂಬೇಡ್ಕರ್ ಅವರು.ಅಂಬೇಡ್ಕರ್ ಅವರಿಗಾಗಲಿ, ಇಲ್ಲಾ ಹೆಗಡೇವಾರ್… pic.twitter.com/qpM6duFzA6
— 𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺) (@Gururaj1972) October 21, 2025