ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆದಿದ್ದು,ಕೂಡಲೇ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಲ್ಲಿ ಲೂಟಿ ಹೊಡೆದಿದ್ದಾಯ್ತು ಈಗ ಖರ್ಗೆ ಒಡೆತನದ ಸಿದ್ದಾರ್ಥಕಾನೂನು ಕಾಲೇಜಿನಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಪಿಎಸ್ಐ ಹಗರಣದ ಬಗ್ಗೆ ಸುಳ್ಳು ಹೇಳುವ ಪ್ರಿಯಾಂಕ್ ಖರ್ಗೆ, ತಮ್ಮದೇ ಸಂಸ್ಥೆಯಲ್ಲಿ ನಡೆದಿರುವ ಈ ಮಹಾ ಪರೀಕ್ಷಾ ಅಕ್ರಮಕ್ಕೆ ಏನು ಹೇಳುತ್ತಾರೆ? ಕಾನೂನು ಕಾಲೇಜಿನಲ್ಲೇ ಕಾನೂನು ಬಾಹಿರ ಕೆಲಸ ನಡೆಸುತ್ತಿದ್ದಾರೆ? ಇನ್ನೂ ಇಂತಹ ಅದೆಷ್ಟು ಅಕ್ರಮಗಳು ನಡೆದಿವೆ? ಎಂದು ಬಿಜೆಪಿ ತನ್ನ X ಖಾಜತೆಯಲ್ಲಿ ಪ್ರಶ್ನಿಸಿದೆ.
ಕೂಡಲೇ ಸರ್ಕಾರ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಬಂಧ ಪಟ್ಟವರ ಮೇಲೆ FIR ಹಾಕಿ ಬಂಧಿಸಿ ವಿಚಾರಣೆ ನಡೆಸಬೇಕು, ನ್ಯಾಯಯುತವಾಗಿ ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಕೂಡದು ಎಂದು ಒತ್ತಾಯಿಸಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಲ್ಲಿ ಲೂಟಿ ಹೊಡೆದಿದ್ದಾಯ್ತು ಈಗ @kharge ಒಡೆತನದ ಸಿದ್ದಾರ್ಥಕಾನೂನು ಕಾಲೇಜಿನಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆಯುತ್ತಿದೆ.
ಪಿಎಸ್ಐ ಹಗರಣದ ಬಗ್ಗೆ ಸುಳ್ಳು ಹೇಳುವ @PriyankKharge ಯವರೇ? ನಿಮ್ಮದೇ ಸಂಸ್ಥೆಯಲ್ಲಿ ನಡೆದಿರುವ ಈ ಮಹಾ ಪರೀಕ್ಷಾ ಅಕ್ರಮಕ್ಕೆ ಏನು ಹೇಳುತ್ತೀರಿ? ಕಾನೂನು ಕಾಲೇಜಿನಲ್ಲೇ ಕಾನೂನು… pic.twitter.com/N8hwKfSn5z
— BJP Karnataka (@BJP4Karnataka) January 7, 2026



















































