ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ನಂತರ ಸೇನಾಕಾರ್ಯಾಚರಣೆ ಬಿರುಸುಗೊಂಡಿದೆ. ಅದರ ಜಿತೆಯಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೆಕೂಡಾ ತನಿಖೆಯನ್ನು ಚುರುಕುಗೊಳಿಸಿದೆ. ಕಾಶ್ಮೀರದ ವಿವಿಧೆಡೆ 12ಕ್ಕೂ ಹೆಚ್ಚು ಉಗ್ರರ ಇರುವಿಕೆಯನ್ನು ಗುರುತಿಸಿರುವ ತನಿಖಾ ತಂಡಗಳು ಅವರ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ.
ಈ ನಡುವೆ, ಎಂಟು ಮಂದಿ ಲಷ್ಕರ್-ಎ-ತೋಯ್ಬಾ( LET) ಮತ್ತು ಹಾಗೂ ಮೂವರು ಜೈಶ್-ಎ-ಮೊಹಮ್ಮದ್ ಮತ್ತು ಮೂವರು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಶಂಕಿತರು ಪಹಲ್ಗಾಮ್ ದಾಳಿಗೆ ನೆರವು ನೀಡಿದ್ದಾರೆ ಎಂಬ ಸಂಗತಿಯನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ನಡುವೆ, ಶಂಕಿತ ಉಗ್ರರಾದ ಅಲಿ ಭಾಯಿ ಮತ್ತು ಹಾಶಿಮ್ ಮೂಸಾ ಮತ್ತು ಆದಿಲ್ ಹುಸೇನ್ ಥೋಕರ್ ರೇಖಾಚಿತ್ರಗಳನ್ನು ಬಿಡುಗಡೆ ಮಾದಲಾಗಿದ್ದು ಇವರ ಸುಳಿವು ನೀಡಿದವರಿಗೆ ತಲಾ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.