ಅಕ್ಟೌ: ಕಜಾಕಿಸ್ತಾನದಲ್ಲಿ ವಿಮಾನ ದುರಂತಕ್ಕೀಡಾಗಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕಜಾಕಿಸ್ತಾನದ ಅಕ್ಟೌ ಬಳಿ ಅಪಘಾತ ಸಂಭವಿಸಿದ ವಿಮಾನದಲ್ಲಿ 110 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಜರ್ಬೈಜಾನ್ ಏರ್ಲೈನ್ಸ್ ನಿರ್ವಹಿಸುತ್ತಿದ್ದ ವಿಮಾನವು ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಹಾರುತ್ತಿತ್ತು.
ವಿಮಾನ ನೆಲಕ್ಕುರುಳಿದ ಸ್ಥಳದಲ್ಲಿ ಬೆಂಕಿಯ ಜ್ವಾಲೆ ಕಂಡುಬಂದಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ನಡೆದಿದೆ.