ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ ಬಳಿ ಕೆರೆಯಲ್ಲಿ ಈಜಲು ತೆರಳಿದ್ದಂತ ಮೂವರು ಜಲಸಮಾಧಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ನ ಬೂಡದಮಿಟ್ಟೆ ಕೆರೆಗೆ ಈಜಲೆಂದು ತಂದೆ-ಮಗ ಹಾಗೂ ಸ್ನೇಹಿತರ ಪುತ್ರ ತೆರಳಿದ್ದರು. ಆದರೆ ನೀರಿನಲ್ಲಿ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 40 ವರ್ಷದ ರಮೇಶ್, ಅವರ ಪುತ್ರ 12 ವರ್ಷದ ಅಗಸ್ತ್ಯ ಮತ್ತು 15 ವರ್ಷದ ಶರಣ್ ಎಂಬವರು ಸಾವನ್ನಪ್ಪಿದ್ದಾರೆ.
ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಪರಿಶೀಲನೆ ನಡೆಸಿದರು.