ಬೆಂಗಳೂರು : ರಷ್ಯಾ ಮಿಲಿಟರಿ ದಾಳಿಯಿಂದ ನಲುಗಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತ ಮೂಲದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಮುಂದುವರಿದಿದ್ದು, ಇಂದು ಮತ್ತಿಂದು ತಂಡ ದೆಹಲಿಗೆ ಬಂದಿಳಿದಿದೆ.
ಇದೇ ವೇಳೆ, ಮುಂಬಯಿಗೆ ಬಂದ 219 ವಿದ್ಯಾರ್ಥಿಗಳ ಪೈಕಿ 12 ಮಂದಿ ರಾಜ್ಯದ ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಬೆಂಗಳೂರು ತಲುಪಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕನ್ನಡಿಗ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯದ ಸಚಿವ ಆರ್ ಅಶೋಕ್ ಅವರು ಸ್ವಾಗತಿಸಿದರು.
#WATCH | Bengaluru: Union Minister Pralhad Joshi and Karnataka Minister R Ashoka welcome and interact with students who returned from Ukraine amid #RussiaUkraineConflict pic.twitter.com/YM7rmmCfWF
— ANI (@ANI) February 27, 2022