ಪುಣೆ: ಸಮರ ಸಂತ್ರಸ್ತ ಉಕ್ರೇನ್‌ನಿಂದ ಸುಮಾರು 6 ಸಾವಿರ ಭಾರತೀಯರು ಸ್ವದೇಶಕ್ಕೆ ವಾಪಾಸಾಗಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್, ಇನ್ನೂ ಹಲವರು ಭಾರತೀಯರು ಇದ್ದು ಅವರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಸಾಗಿದೆ ಎಂದು ತಿಳಿಸಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಸುಮಾರು 20 ಸಾವಿರ ಮಂದಿ ಭಾರತೀಯರು ಇದ್ದರೆಂಬ ಬಗ್ಗೆ ಮಾಹಿತಿ ಇತ್ತು. ಈ ಪೈಕಿ ಸುಮಾರು 4 ಸಾವಿರ ಮಂದಿ ಯುದ್ಧ ಆರಂಭಕ್ಕೆ ಮುನ್ನವೇ ಆಗಮಿಸಿದ್ದಾರೆ ಎಂದರು. ಸಮರ ಆರಂಭದ ನಂತರ ಮಂಗಳವಾರದವರೆಗೆ 2 ಸಾವಿರ ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ಅಂಕಿ ಅಂಶ ಒದಗಿಸಿದರು.