ನವದೆಹಲಿ: ದೇಶದಲ್ಲಿ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಒತ್ತಾಯಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಭಾರತದ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇವಿಎಂಗಳ ಭದ್ರತೆಯನ್ನು ಪ್ರಶ್ನಿಸಿ ಡಾ.ಕೆ.ಎ.ಪಾಲ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅಂತಹ ಅರ್ಜಿಯನ್ನು ಸಲ್ಲಿಸಲು ಪಾಲ್ ಅವರ ಪ್ರೇರಣೆಯನ್ನು ಪ್ರಶ್ನಿಸಿದೆ. ಗೆಲುವಿನ ಸಂದರ್ಭದಲ್ಲಿ ಸುಮ್ಮನಿದ್ದು ಸೋಲಿನ ಸಂದರ್ಭದಲ್ಲಿ ಇವಿಎಂ ಬಗ್ಗೆ ಅನುಮಾನ ಏಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಇವಿಎಂ ಕುರಿತ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.