ಸ್ಯಾಂಡಲ್ ವುಡ್ ನಲ್ಲಿ ಯಾರ ಸಹಕಾರವೂ ಇಲ್ಲದೆಯೇ ಒಬ್ಬಂಟಿಯಾಗಿ ಬೆಳೆದು ಬಂದು, ಸದ್ಯ ಬಾಲಿವುಡ್ ನಲ್ಲೂ ಗುರುತಿಸಿಕೊಂಡಿರುವ ನಟ ಯಶ್..ಸದ್ಯ ಕೆ.ಜಿ.ಎಫ್ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ರಾಕಿ ಭಾಯ್, ಅದರ ನಡುವೆಯೂ ಮನೆ, ಮಡದಿ ಹಾಗೂ ಇಬ್ಬರು ಮಕ್ಕಳಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ.. ಹೀಗೆ ಕಷ್ಟದಲ್ಲಿ ಬೆಳೆದು ಬಂದಿರುವ ನಟ ಯಶ್, ಮಕ್ಕಳನ್ನ ಹೇಗೆ ಬೆಳೆಸಬೇಕು ಅಂತ ಚೆನ್ನಾಗಿ ಅರಿತಿರುವಂತಿದೆ. ಅದಕ್ಕೆ ಸಾಕ್ಷಿ ಯಶ್ ಆಡಿರುವ ಮಾತುಗಳು.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಟ ಯಶ್ ಭಾಗಿಯಾಗಿದ್ದರು. ಅಲ್ಲಿ, ಪುತ್ರಿ ಆಯ್ರಾ ಬಗ್ಗೆ ಕೇಳಿದಾಗ,”ಎಲ್ಲಾದರೂ ಹೋದರೆ ಮಕ್ಕಳ ಬಗ್ಗೆ ಕೇಳುತ್ತಾರೆ. ಕೆಲವರು ಆಯ್ರಾನ ನೋಡೋಕೆ ಮನೆಯವರೆಗೂ ಹುಡುಕಿಕೊಂಡು ಬರುತ್ತಾರೆ..ಇದು ಸಂತಸದ ವಿಚಾರವೇ ಆಗಿದೆ. ಆದರೆ, ಆಯ್ರಾಗೆ ನೀವು ಸುಖಾ ಸುಮ್ಮನೆ ಗೌರವಿಸಬೇಕಿಲ್ಲ, ಯಾರದ್ದೋ ಸ್ಟಾರ್ ಮಕ್ಕಳು ಅಂತ ಹೊಗಳಬೇಕಾಗಿಯೂ ಇಲ್ಲ. ಅವರೇನು ಕೆಲಸ ಮಾಡ್ತಾರೆ ಅಂತ ನೋಡಿ ಗೌರವ ಕೊಡಿ. ನನ್ನ ಮಗಳು ಬೆಳೆದು ದೊಡ್ಡವಳಾಗಿ ಸಾಧನೆ ಮಾಡಿದರೆ ಗೌರವ ಕೊಡಿ. ಅಲ್ಲಿಯವರೆಗೂ ಎಲ್ಲಾ ಮಕ್ಕಳು ಒಂದೇ. ಪ್ರೀತಿ ತೋರಿಸಿ ಸಾಕು” ಅಂತ ನಟ ಯಶ್ ಹೇಳಿದರು.
ಯಶ್ ಈ ಮಾತಿಗೆ ಮಾರುಹೋದ ಅವರ ಅಭಿಮಾನಿಗಳು ಶಿಳ್ಳೆ ಚಪ್ಪಾಲೆಗಳ ಸುರುಮಳೆಗೈದಿದ್ದಾರೆ. ಅಲ್ಲದೆ ಅವರ ಮಾತಿನಿಂದ ಅವರ ಮೇಲಿದ್ದ ಸಿನಿ ಪ್ರಿಯರ ಪ್ರೀತಿ ಗೌರವ ಇನ್ನೂ ಹೆಚ್ಚಾಗಿದೆ.