ಬೆಂಗಳೂರು: ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಪ್ಲಾಟ್ಫಾರ್ಮ್ ವೇದಿಕೆಗಳು ಇನ್ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಈ ಸಂಬಂಧದ ವಿದೇಯಕವನ್ನು ವಿಧಾನಸಭೆ ಅಂಗೀಕರಿಸಿದೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ವಿದೇಯಕ ಸೋಮವಾರ ಅಂಗೀಕಾರಗೊಂಡಿದೆ.
ಮಸೂದೆ ಮಂಡಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಈ ಹಿಂದೆ ಸರ್ಕಾರ ಎಪಿಎಂಸಿ ಯಾರ್ಡ್‌ಗಳನ್ನು ಮಾತ್ರ ನಿಯಂತ್ರಿಸುತ್ತಿತ್ತು. ಆದರೆ ಈ ಕಾಮರ್ಸ್ ಕ್ಷೇತ್ರವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರುತ್ತಿದ್ದೇವೆ ಎಂದು ತಿಳಿಸಿದರು
ಈ ಮಸೂದೆಯಿಂದಾಗಿ ಇ- ಪ್ಲಾಟ್ ಫಾರ್ಮ್’ಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್, ಸೆಸ್ ನಿರ್ವಹಿಸುವ, ಅಮಾನತುಪಡಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ.