ಹೈದರಾಬಾದ್: ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಇದೇ ಅಖಾಡದಲ್ಲಿ ನಾಯಕರ ಹೇಳಿಕೆಗಳನ್ನು ತಿರುಚಿ ಟ್ರೋಲ್ ಮಾಡುವ ಕೃತ್ಯಗಳು ರಾಜಕೀಯ ಪಕ್ಷಗಳಿಗೆ ಸವಾಲೆಂಬಂತಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ವಿಡಿಯೋವನ್ನು ತಿರುಚಿದ ಪ್ರಕರಣದಲ್ಲಿ ಪೊಲೀಸರು ತೆಲಂಗಾಣ ಕಾಂಗ್ರೆಸ್‌ನ ಐವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಯ ವೀಡಿಯೋವನ್ನು ತಿರುಚಿ ವೈರಲ್ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ತೆಲಂಗಾಣ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೆ ಗುರಿಪಡಿಸಿ, ಬಳಿಕ ಜಾಮೀನಿನಮೇಲೆ ಬಿಡುಗಡೆಗೊಳಿಸಿದ್ದಾರೆ.