ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಇದೇ ತಿಂಗಳು ಕೊನೆಯ ವಾರ ತೆರೆ ಕಾಣಲಿದ್ದು, ಈಗಾಗ್ಲೇ ಈ ಚಿತ್ರದ ಹಾಡೊಂದು ಭಾರೀ ಫೇಮಸ್ ಆಗಿದೆ. ಹಾಡಿನಲ್ಲಿ ಹಾಕಲಾದ ಸ್ಟೆಪ್ಸ್ ಸಹ ಟಿಕ್ ಟಾಕ್ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದ್ದು ಎಲ್ಲರ ಮೆಚ್ಚುಗೆ ಪಡೆದಿದೆ.
ಚಿತ್ರದ ಪ್ರಮೋಷನ್ ಗಾಗಿ ಚೆನ್ನೈಗೆ ಹಾರಿರುವ ರಕ್ಷಿತ್ ಶೆಟ್ಟಿ, ಅಲ್ಲಿನ ಮರೀನಾ ಬೀಚ್ ಬದಿಯಲ್ಲಿ ಈ ಹಾಡಿಗೆ ಸಖತ್ತಾಗಿಯೇ ಸ್ಟೆಪ್ಸ್ ಹಾಕಿದ್ದಾರೆ..ಅಲ್ಲದೆ ಈ ಸಿಗ್ನೇಚರ್ ಸ್ಟೆಪ್ಸ್ ಫಾಲೋ ಮಾಡುವಂತೆ ಇಂಡಸ್ಟ್ರಿಯ ಪವರ್ ಪ್ಯಾಕ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ, ಕೊರಿಯೋಗ್ರಾಫರ್ ಇಮ್ರಾನ್ ಮಾಸ್ಟರ್, ದೂದ್ ಪೇಡ ದಿಗಂತ್ ಹಾಗೂ ಸಂಯುಕ್ತಾ ಹೆಗ್ಡೆ ಅವರಿಗೆ ಚಾಲೆಂಜ್ ಹಾಕಿದ್ದಾರೆ..