ಮಾಜಿ ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ಮುಖಂಡ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ಏಮ್ಸ್ ನಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಸುಷ್ಮಾ ಅವರನ್ನು ನಿನ್ನೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶಯಾರದು.
ಸುಷ್ಮಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಏಮ್ಸ್ ತಲುಪಿದರು.
ಉತ್ತಮ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್, ಪಕ್ಷದಲ್ಲಿ ಮೆಚ್ಚುಗೆ ಮತ್ತು ಮಹತ್ವದ ಸ್ಥಾನ ಪಡೆದಿದ್ದರು. ‘ಅಟಲ್ ಯುಗ’ದಿಂದ’ ಮೋದಿ ರಾಜ್ ‘ವರೆಗೆ’ ಸುಷ್ಮಾ ಸ್ವರಾಜ್ ರಾಜಕೀಯ ಹೆಜ್ಜೆ ಗುರುತನ್ನು ತಿಳಿಯೋಣ…