ಟಗರು ಚಿತ್ರದ ನಂತರ ಡಾಲಿ ಅಂತಲೇ ಹೆಸರು ಗಳಿಸಿರುವ ನಟ ಧನಂಜಯ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಸದ್ಯ ಸಲಗ ಚಿತ್ರದ ಶೂಟಿಂಗ್ ನಲ್ಲಿದ್ದು, ಆ ಸೆಟ್‍ನಲ್ಲೇ ಇಂದು ಸಿಂಪಲ್ ಆಗಿ ಕೇಕ್ ಕತ್ತರಿಸುವ ಮೂಲಕ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಸಲಗ ಚಿತ್ರದಲ್ಲಿ ಎಸಿಪಿ ಸಮರ್ಥ್ ಆಗಿ ಖಾಕಿ ಖದರ್ ಮೆರೆಯಲಿದ್ದಾರೆ ಈ ಪ್ರತಿಭಾವಂತ ನಟ.
ಇನ್ನು ಹುಟ್ಟುಹಬ್ಬದ ಪ್ರಯುಕ್ತ ಧನಂಜಯ್ ಅಭಿನಯದ ಮತ್ತೊಂದು ಚಿತ್ರ “ಬಡವ ರಾಸ್ಕಲ್”ನ ಪೋಸ್ಟರನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಧನಂಜಯ್ ಭಡ್ತಿ ಹೊಂದಲಿದ್ದಾರೆ.
ಸಲಗ, ಬಡವ ರಾಸ್ಕಲ್ ಮಾತ್ರವಲ್ಲದೆ ಯುವರತ್ನ, ಪೊಗರು, ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಡಾಲಿ ಚಿತ್ರಗಳಲ್ಲಿ ವಿಲನ್ ಮಾತ್ರವಲ್ಲದೆ ನಾಯಕನಾಗಿಯೂ ಧನು ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
© 2020 Udaya News – Powered by RajasDigital.